ಚೀನಾ ಮೊಬೈಲ್ ಕಂಪನಿ- ಇಸ್ರೋ ಒಪ್ಪಂದ..! – ಪ್ರಶ್ನೆಗಳು..!

ಮೆಸೇಜ್ ಮೂಲಕ ದಿಕ್ಸೂಚಿ ಮಾಹಿತಿಯನ್ನು ನೀಡುವ ಸಂಬAಧ ಚೀನಾ ಮೂಲದ ಮೊಬೈಲ್ ಕಂಪನಿ ಓಪೋ ಜೊತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಒಪ್ಪಂದ ಮಾಡಿಕೊಂಡಿದೆ.

ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ ಅಥವಾ NavIC ಮೆಸೇಜ್ ಸೇವೆಗಳ ತಾಂತ್ರಿಕ ಮಾಹಿತಿಯನ್ನು ಓಪೋ ಜೊತೆಗೆ ಇಸ್ರೋ ಹಂಚಿಕೊಳ್ಳಲಿದೆ. ಈ ನಾವ್‌ಐಸಿ ತಂತ್ರಜ್ಞಾನವನ್ನು ಓಪೋ ತನ್ನ ಮೊಬೈಲ್‌ನಲ್ಲಿ ಅಳವಡಿಸಲಿದ್ದು, ಇದರಿಂದ ಭಾರತೀಯ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದು ಇಸ್ರೋ ಹೇಳಿದೆ. ಮುಂಬರುವ ಎಲ್ಲ ಮೊಬೈಲ್ ಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಇಸ್ರೋ ಓಪೋಗೆ ಕೇಳಿದೆ.

ಈ ತಂತ್ರಜ್ಞಾನವನ್ನು ಸಂಪರ್ಕ ಅಥವಾ ಸಂವಹನ ಸಮಸ್ಯೆ ಇರುವ ವಿಶೇಷವಾಗಿ ಸಮುದ್ರಗಳಲ್ಲಿ ಜೀವ ರಕ್ಷಕ ಸಂದೇಶಗಳ ರವಾನೆಗೆ ಬಳಸಬಹುದಾಗಿದೆ. ಇದುವರೆಗೆ ಈ ತಂತ್ರಜ್ಞಾನವನ್ನು ಪಿಎನ್‌ಟಿ ಸೇವೆಗಳಿಗಷ್ಟೇ ಬಳಸಲಾಗುತ್ತಿತ್ತು.

ಆದರೆ ಚೀನಾ ಮೂಲದ ಕಂಪನಿ ಜೊತೆಗೆ ಇಸ್ರೋ ಒಪ್ಪಂದ ಮಾಡಿಕೊಂಡಿರುವುದು ಈಗ ಟೀಕೆಗಳಿಗೆ ಕಾರಣವಾಗಿದೆ. ಗಲ್ವಾನ್ ನಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ ಬಳಿಕ ಚೀನಾದ ಕಂಪನಿಗಳಿಗೆ ಪ್ರಧಾನಿ ಮೋದಿ ಸರ್ಕಾರ ನಿರ್ಬಂಧ ಹೇರಿತ್ತು. ಇದರ ಜೊತೆಗೆ ಭಾರತದ ಮೇಲೆ ಚೀನಾದಿಂದ ಸೈಬರ್ ಕುತಂತ್ರ ಬಗ್ಗೆ ಎಚ್ಚರಿಕೆಗಳಿರುವ ನಡುವೆಯೂ ಚೀನಾದ ಮೊಬೈಲ್ ಕಂಪನಿಯೊAದಿಗೆ ಇಸ್ರೋ ಒಪ್ಪಂದ ಮಾಡಿಕೊಂಡಿರುವುದು ಪ್ರಶ್ನೆಗಳನ್ನು ಸೃಷ್ಟಿಸಿದೆ.

 

LEAVE A REPLY

Please enter your comment!
Please enter your name here