ತೈವಾನ್ ಸುತ್ತಮುತ್ತಲಿನ ಸಮುದ್ರದ ಪ್ರದೇಶದಲ್ಲಿ ಚೀನಾ ಸೇನೆ ಬ್ಯಾಲೆಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸಿದೆ.
ಅಮೇರಿಕಾ ಸಂಸತ್ತಿನ ಸಭಾಪತಿ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ ಈ ದಾಳಿ ನಡೆಸಿದೆ.
ತೈವಾನ್ ದ್ವೀಪ ಪ್ರದೇಶವನ್ನು ಚೀನಾ ತನ್ನ ಸೇನೆಯಿಂದ ಸುತ್ತುವರೆದಿದೆ. ಇಂದು ಸಾಯಂಕಾಲ 4 ಗಂಟೆಗೆ ಚೀನಾ ತೈವಾನ್ನಿಂದ ಕೇವಲ 20 ಕಿ.ಮೀ ದೂರದಲ್ಲಿ ತನ್ನ ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ತೈವಾನ್ ಸರ್ಕಾರ ಹೇಳಿದೆ.
ನ್ಯಾನ್ಸಿ ಫೆಲೋಸಿ ಭೇಟಿಗೆ ಚೀನಾ ಸರ್ಕಾರ ವಿರೋಧಿಸಿತ್ತು. ಆದಾಗ್ಯೂ ಸ್ವಯಂ ಆಡಳಿತರದಲ್ಲಿರುವ ತೈವಾನ್ ಸರ್ಕಾರ ನ್ಯಾನ್ಸಿಯವರನ್ನು ದೇಶಕ್ಕೆ ಕರೆಯಿಸಿಕೊಂಡಿತ್ತು. ಈ ಬೆನ್ನಲ್ಲೇ, ಚೀನಾ ತೈವಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ ತನ್ನ ಸೇನೆಯ ಸಮರಾಭ್ಯಾಸ ಆರಂಭಿಸಿದೆ.
ಕ್ಷಿಪಣಿಗಳ ಪ್ರಯೋಗ ಮಾಡಿರುವ ಉದ್ದೇಶ ಕೇವಲ ಅವುಗಳ ಸಿದ್ದತೆಗೆ ಮಾತ್ರ ಎಂದು ಚೀನಾದ ಸೇನೆಯ ವಕ್ತಾರ ಕೊಲೋನಿಲ್ ಶಿ ಯಿ ಹೇಳಿದ್ದಾರೆ.
ಚೀನಾ ಸೇನೆ ತೈವಾನ್ ಸುತ್ತಮುತ್ತ ಹಲವು ಪ್ರದೇಶಗಳಲ್ಲಿ 11 ಡಾಂಗ್ಫೆಂಗ್ ಕ್ಲಾಸಿಕ್ ಬ್ಯಾಲೆಸ್ಟಿಕ್ ಕ್ಷಿಪಣಿಗಳ ಪ್ರಯೋಗ ಮಾಡಿದೆ. ಪ್ರಾದೇಶಿಕ ಶಾಂತಿಗೆ ಭಂಗ ತರುವ ಚೀನಾದ ಈ ಪ್ರಯತ್ನವನ್ನು ಖಂಡಿಸುತ್ತೇವೆ ಎಂದು ತೈವಾನ್ ಸರ್ಕಾರ ಹೇಳಿದೆ.