China Border: ಭಾರತದ  ಗಡಿ  ಗ್ರಾಮಗಳು  ಖಾಲಿ ಖಾಲಿ – ಆತಂಕ  ಮೂಡಿಸುತ್ತಿರುವ ವರದಿ

ವಾರಣಾಸಿ ಬೀದಿಗಳಲ್ಲಿ.. ಗಂಗೆಯಲ್ಲಿ  ಕಷಾಯಧಾರಿ ಪ್ರಧಾನಿ  ನರೇಂದ್ರ ಮೋದಿ ಮೆರವಣಿಗೆ ನಡೆಯುತ್ತಿರುವ ಹೊತ್ತಲ್ಲೇ ಭಾರತ – ಚೀನಾ ಗಡಿಯಿಂದ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಗಡಿಯಾಚೆ ಚೀನಾ  ಹೊಸ  ಹೊಸಗ್ರಾಮಗಳನ್ನು  ನಿರ್ಮಿಸಿ ಸಾಗಿಸುತ್ತಿದ್ದರೇ, ಮತ್ತೊಂದೆಡೆ ಭಾರತದ  ಕಡೆಯ ಚೀನಾ- ನೇಪಾಳ ಗಡಿಯ ಗ್ರಾಮಗಳು ಖಾಲಿ  ಆಗುತ್ತಿರುವ ಸುದ್ದಿ ಹೊರಬೀಳುತ್ತಿವೆ. ಗಡಿ ಗ್ರಾಮಗಳನ್ನು  ತೊರೆದು ಜನ  ವಲಸೆ  ಹೋಗುತ್ತಿದ್ದಾರೆ.

ಉತ್ತರಾಖಂಡದ ಪಿತೋರ್ ಘಡ ಜಿಲ್ಲೆಯ ಚೀನಾ  ನೇಪಾಳ ಗಡಿಯಲ್ಲಿರುವ 59 ಗ್ರಾಮಗಳು ಸಂಪೂರ್ಣ  ಖಾಲಿ ಆಗಿವೆ. ಯಾವ ಗ್ರಾಮ ನೋಡಿದರೂ ಮನುಷ್ಯನ  ಜಾಡು ಸಿಗುತ್ತಿಲ್ಲ.

ಜಲ್ ಜೀವನ್ ಮಿಷನ್ ತಾಜಾ ವರದಿ  ಪ್ರಕಾರ, ಪಿತೋರ್ ಘಡ ಜಿಲ್ಲೆಯ 1542 ಗ್ರಾಮಗಳಲ್ಲಿ ಜನ ವಾಸ  ಇದ್ದಾರೆ. ಮೂರು ವರ್ಷದ ಹಿಂದೆ 1601 ಗ್ರಾಮಗಳಲ್ಲಿ ಜನ ವಾಸ  ಇದ್ದರು.59ಗ್ರಾಮಗಳು ಖಾಲಿ  ಇವೆ.

ಮೂರು ವರ್ಷದ  ಹಿಂದೆ ಈ ಗ್ರಾಮಗಳಲ್ಲಿ 16ಸಾವಿರ ಜನ ವಾಸ ಇದ್ದರು. 2019, 2020, 2021ಮನೆ ಮನೆ ಸಮೀಕ್ಷೆ ನಡೆಸಿದಾಗ 40-50 ಗ್ರಾಮಗಳು  ಖಾಲಿ  ಆಗಿವೆ  ಎಂದು ಜಲ್ ಜೀವನ್  ಮಿಷನ್ ಅಧಿಕಾರಿ  ರಂಜಿತ್ ಹೃರ್ಮಸತ್ತು ತಿಳಿಸಿದ್ದಾರೆ.

41 ಗ್ರಾಮಗಳಲ್ಲಿ ಅರ್ಧದಷ್ಟು  ಜನ..
ಮೈಗ್ರಷನ್ ಕಮಿಷನ್ ಡೇಟಾ ಪರಿಶೀಲಿಸಿದರೆ, 41 ಗ್ರಾಮಗಳಲ್ಲಿ ಅರ್ಧದಷ್ಟು ಜನ ಇತರೆ  ಪ್ರದೇಶಗಳಿಗೆ ವಲಸೆ  ಹೋಗಿದ್ದಾರೆ.

ವಲಸೆಗೆ  ಕಾರಣ  ಏನು?

ಉತ್ತರಾಖಂಡ್ ರಾಜ್ಯ ಸ್ಥಾಪನೆ ಆಗಿ 21 ವರ್ಷ ಕಳೆದಿದೆ. ಗಡಿ  ಅಭುವೃದ್ಧಿಗಾಗಿ  ಸಾವಿರಾರು  ಕೋಟಿ ರೂಪಾಯಿ  ವ್ಯಾಯಿಸಿದೆ. ಆದರೆ, ಈಗಲೂ  ಗಡಿಯ  ಹಲವು ಪ್ರದೇಶಗಳಲ್ಲಿಕನಿಷ್ಠ ಮೂಲ  ಸೌಕರ್ಯಗಳು  ಇಲ್ಲ. ಸರಿಯಾದ  ರಸ್ತೆಗಳು ಇಲ್ಲ. ವಿದ್ಯುತ್, ನೀರು, ಮಾಹಿತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿ ಇಲ್ಲದ ಕಾರಣ ವಲಸೆ  ಹೆಚ್ಚಿದೆ.

LEAVE A REPLY

Please enter your comment!
Please enter your name here