ADVERTISEMENT
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ ಎನ್ ಬಚ್ಚೇಗೌಡ ಅವರು ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರಕಾರ 75 ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿಕೊಳ್ಳಬೇಕು. ಈಗ ನನಗೆ 81 ವರ್ಷ ವಯಸ್ಸಾಗಿದೆ. ಈ ಬಾರಿ ಲೋಕಸಭೆಗೆ ಟಿಕೆಟ್ ಕೊಡುವುದಿಲ್ಲ ಎಂದು ಮೋದಿ ನನಗೆ ಹೇಳಿಬಿಟ್ಟಿದ್ದಾರೆ.
ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ-ಮಗ-ಮೊಮ್ಮಗ-ಮಗಳ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಮೋದಿಯವರು ಹೇಳಿದ್ದಾರೆ
ಎಂದು ಬಿ ಎನ್ ಬಚ್ಚೇಗೌಡ ಅವರು ಹೇಳಿದ್ದಾರೆ.
ಮಾಜಿ ಸಚಿವ ಸುಧಾಕರ್ ಮತ್ತು ಎಂಟಿಬಿ ವಿರುದ್ಧ ಅಸಮಾಧಾನ:
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಮತ್ತು ಸಚಿವ ಎಂ ಟಿ ಬಿ ನಾಗರಾಜ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಶಿಷ್ಟಾಚಾರಕ್ಕೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ನನ್ನ ಹೆಸರಿತ್ತು. ಆದರೆ ಸಂಸದನಾಗಿ ನನ್ನನ್ನು ಅವರು ಬಳಸಿಕೊಳ್ಳಲಿಲ್ಲ
ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಗೆ ವಾಪಸ್ ಬರ್ತಾರೆ:
ಕರ್ನಾಟಕದಲ್ಲಿ ಇದುವರೆಗೆ ಬಿಜೆಪಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಲ್ಲ. ನಾಲ್ಕು ತಿಂಗಳಾಗುತ್ತ ಬರ್ತಿದೆ, ಪ್ರತಿಪಕ್ಷದ ನಾಯಕನ್ನ ಮಾಡಲಿಕ್ಕೆ ಆಗಲಿಲ್ಲ. ಬಿಜೆಪಿಗೆ ಹಿನ್ನಡೆಯಾಗಿದೆ. ಬಿಜೆಪಿಯಲ್ಲೇ ಇರುವುದಕ್ಕೆ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಬಳಿ ಇದ್ದ ಕಾರ್ಯಕರ್ತರಿಗೆ ಇಷ್ಟ ಇಲ್ಲ. ಜೆಡಿಎಸ್ನವರೂ ಕಾಂಗ್ರೆಸ್ಗೆ ಬರ್ತಾರೆ
ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ ಎನ್ ಬಚ್ಚೇಗೌಡ ಹೇಳಿದ್ದಾರೆ.
ADVERTISEMENT