ಮೊದಲ ಬಾರಿಗೆ ಶಾಸಕರಾಗಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ವೆಬ್ಸೈಟ್ ಮೂಲಕ ದೂರು ಸ್ವೀಕಾರ ಮಾಡುತ್ತಿದ್ದಾರೆ.
ಜುಲೈ 8ರಂದು https://pradeepeshwarmla.com/ ಈ ವೆಬ್ಸೈಟ್ಗೆ ಚಾಲನೆ ಸಿಕ್ಕಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತದಾರರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವೆಬ್ಸೈಟ್ಗೆ ತೆರಳಿ ದೂರು ಸಲ್ಲಿಕೆ ಮಾಡಬಹುದು.
ದೂರು ಸಲ್ಲಿಕೆ ವೇಳೆ ದೂರು ಸಲ್ಲಿಕೆದಾರರ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ವಾಟ್ಸಾಪ್ ಸಂಖ್ಯೆ, ಹೋಬಳಿ, ಹೋಬಳಿಯ ಯಾವ ಗ್ರಾಮಕ್ಕೆ ಸೇರಿದವರು ಮತ್ತು ದೂರಿನ ಬಗ್ಗೆ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
ಈ ರೀತಿ ಬರುವ ದೂರನ್ನು ಇಲಾಖಾವಾರು ವಿಭಾಗಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.
ADVERTISEMENT
ಚಿಕ್ಕಬಳ್ಳಾಪುರ ಶಾಸಕರ ಈ ಪ್ರಯತ್ನಕ್ಕೆ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಶಾಸಕರನ್ನು ನೇರವಾಗಿ ಭೇಟಿಯಾಗಲು ಅವಕಾಶ ಇಲ್ಲದೇ ಹೋದರೂ ಶಾಸಕರೇ ನಡೆಸುತ್ತಿರುವ ವೆಬ್ಸೈಟ್ಗೆ ಹೋಗಿ ತಮ್ಮ ದೂರಗಳನ್ನು ಸಲ್ಲಿಸಲು ಅವಕಾಶ ನೀಡಿರುವುದು ಪ್ರಶಂಸೆ ಪಾತ್ರವಾಗಿದೆ.
ADVERTISEMENT