ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರಕ್ಕೆ ಅರ್ಜಿ : ಈ 8 ದಾಖಲೆಗಳು ಕಡ್ಡಾಯ

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವವರು 8 ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಾಲಯ ತಿಳಿಸಿದೆ. 

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಸಚಿವರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್​ ಸದಸ್ಯರು ಮತ್ತು ಲೋಕಸಭಾ ಸದಸ್ಯರ ಕಚೇರಿಗಳಿಂದ ಸಲ್ಲಿಕೆಯಾಗುತ್ತಿರುವ ಅರ್ಜಿಗಳಲ್ಲಿ ಸಮರ್ಪಕ ದಾಖಲಾತಿಗಳಿಲ್ಲದ ಕಾರಣ ಗಮನಕ್ಕೆ ಬಂದಿದೆ. ಇದರಿಂದ ಬಡವರು, ನಿರ್ಗತಿಕರು ಮತ್ತು ನೊಂದ ಜನರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿರುವುದರಿಂದ ಮುಖ್ಯಮಂತ್ರಿ ಪರಿಹಾರ ನಿಧಿಯ ಉದ್ದೇಶ ಈಡೇರಿದಂತಾಗುವುದಿಲ್ಲ. ಈ ನಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯ ಕೆಳಕಂಡ ದಾಖಲೆಗಳನ್ನು ಸಲ್ಲಿಸುವಂತೆ ಸ್ವತಃ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ.

ಸಲ್ಲಿಸಬೇಕಾದ ದಾಖಲೆಗಳು:

1. ಅರ್ಜಿದಾರರ ಪಾಸ್​ಪೋರ್ಟ್​ ಗಾತ್ರದ ಭಾವಚಿತ್ರ 

2. ಅರ್ಜಿದಾರರ ಬಿಪಿಎಲ್​ ಪಡಿತರ ಚೀಟಿ

3. ಅರ್ಜಿದಾರರ ಆಧಾರ್​ ಗುರುತಿನ ಚೀಟಿ (ಅರ್ಜಿದಾರರ ಬ್ಯಾಂಕ್​ ಖಾತೆಯು ಆಧಾರ್​ ಗುರುತಿನ ಚೀಟಿ ಸಂಖ್ಯೆಯೊಂದಿಗೆ ಜೋಡಣೆ ಆಗಿರಬೇಕು).

4. ಆಸ್ಪತ್ರೆ ಬಿಡುಗಡೆ ಸಾರಾಂಶ ಪತ್ರದ ಪ್ರತಿ

5. ಅರ್ಜಿದಾರರ ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮೂಲ ಅಂದಾಜು ಪಟ್ಟು 

6. ಅರ್ಜಿದಾರರು ಬ್ಯಾಂಕ್​ ಖಾತೆ ಹೊಂದಿರಬೇಕು. ಸದರಿ ಖಾತೆಯ ಪಾಸ್​ ಪುಸ್ತಕದ ಮೊದಲ ಪುಟದ ಪ್ರತಿ (ಬ್ಯಾಂಕ್​ ಪಾಸ್​ಬುಕ್​ NPCIಗೆ ಮ್ಯಾಪ್​ ಆಗಿರಬೇಕು).

7. ಅರ್ಜಿದಾರರು ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಸೀಲು ಸಹಿ ಇರುವ ಅಂತಿಮ ಮೂಲ ಬಿಲ್ಲುಗಳು

8. ಅರ್ಜಿದಾರರ ಅಥವಾ ಅವರ ಕುಟುಂಬ ವರ್ಗದವರ ಬಳಕೆಯಲ್ಲಿರುವ ಮೊಬೈಲ್​ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

LEAVE A REPLY

Please enter your comment!
Please enter your name here