ಕೇವಲ ಎರಡ್ಮೂರು ವಾರಗಳ ಹಿಂದಿನವರೆಗೂ ಚಿಕನ್ ಬೆಲೆ ಎಂದಿನಂತೆಯೇ ನಾರ್ಮಲ್ ಆಗಿತ್ತು. ಆದರೆ, ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಈಗ ಚಿಕನ್ ರೇಟ್ ಕೇಳಿ ಜನಸಾಮಾನ್ಯರು ಹೌಹಾರುವಂತಾಗಿದೆ. ಕೆಜಿ ಚಿಕನ್ ಬೆಲೆಯಲ್ಲಿ 100 ರೂಪಾಯಿವರೆಗೂ ಏರಿಕೆ ಕಂಡಿದೆ.
ಬಿಸಿಲ ಝಳದ ಕಾರಣ ಕೋಳಿಗಳ ಉತ್ಪಾದನೆ ದೊಡ್ಡಮಟ್ಟದಲ್ಲಿ ಕುಸಿದಿದೆ. ಕೋಳಿ ಫೀಡರ್ಗಳ ಬೆಲೆಯೂ ದುಬಾರಿಯಾಗಿದೆ. ಇದರ ಪರಿಣಾಮ ಚಿಕನ್ ಬೆಲೆ ಗಗನಮುಖಿಯಾಗಿದೆ.
ಕಳೆದ ಎರಡು ವಾರಗಳಿಂದ ಲೈವ್ ಚಿಕನ್ ಬೆಲೆ ಕೆಜಿ 190ರಿಂದ 195 ರೂಪಾಯಿ ಇದೆ.
ವಿತ್ ಸ್ಕಿನ್ ಚಿಕನ್ ಬೆಲೆ ಕೆಜಿಗೆ 290ರೂಪಾಯಿ ಆಗಿದೆ.
ವಿತ್ಔಟ್ ಸ್ಕಿನ್ ಚಿಕನ್ ಬೆಲೆ 320 ರೂಪಾಯಿ..
ಬೋನ್ಲೆಸ್ ಚಿಕನ್ ಪ್ರತಿ ಕೆಜಿಗೆ359 ರೂಪಾಯಿ ಆಗೋಗಿದೆ.
ಕಳೆದ ಎರಡು ತಿಂಗಳಲ್ಲಿ ಚಿಕನ್ ಬೆಲೆ ದುಪ್ಪಟ್ಟು ಆಗಿರುವುದು ಗಮನಾರ್ಹ.
ಪರಿಣಾಮ ಚಿಕನ್ ಕೊಳ್ಳುವವರ ಸಂಖ್ಯೆ ಕಡಿಮೆ ಆಗಿದೆ. ಎರಡ್ಮೂರು ಕೆಜಿ ಚಿಕನ್ ಅನ್ನು ಮನೆಗೆ ಕೊಂಡೊಯ್ಯುತ್ತಿದ್ದವರು ಈಗ ಒಂದು ಕೆಜಿ ಸಾಕು ಬಿಡಪ್ಪ ಎನ್ನುತ್ತಿದ್ದಾರೆ.. ಚಿಕನ್ ಶಾಪ್ ಮಾಲೀಕರು ಬೇಸರದಲ್ಲಿದ್ದಾರೆ.
ಕೋಳಿಗಳ ಉತ್ಪಾದನೆಯಲ್ಲಿ ಬಳಸುವ ಸೋಯಾ, ಮುಸುಕಿನಜೋಳದ ಪುಡಿ ಬೆಲೆಯೂ ದುಬಾರಿ ಆಗಿರುವುದು ಚಿಕನ್ ಬೆಲೆ ಹೆಚ್ಚಲು ಕಾರಣವಾಗಿದೆ. ಕಳೆದ ವರ್ಷ ಸೋಯಾ ಬೆಲೆ ಪ್ರತಿ ಕ್ವಿಂಟಾಲ್ಗೆ 5000 ರೂಪಾಯಿ ಇತ್ತು.ಇದೀಗ ಇದರ ಬೆಲೆ 7200 ರೂಪಾಯಿ ಆಗಿದೆ.
ಪ್ರಸ್ತುತ ಸೀಜನ್ನಲ್ಲಿ 3 ಲಕ್ಷಕ್ಕೂ ಅಧಿಕ ಮದುವೆಗಳು ಇರುವುದರಿಂದ, ಪೂರೈಕೆಯೂ ಕಡಿಮೆ ಇರುವುದರಿಂದ ಚಿಕನ್ ಬೆಲೆ ಇನ್ನಷ್ಟು ಹೆಚ್ಚುವ ಸಂಭವ ಇದೆ ಎಂದು ಚಿಕನ್ ಸೆಂಟರ್ ಮಾಲೀಕರು ಅಭಿಪ್ರಾಯಪಡುತ್ತಾರೆ
ADVERTISEMENT
ADVERTISEMENT