ಈ ವರ್ಷದ ಅಂತ್ಯದಲ್ಲಿ ಛತ್ತೀಸ್ಗಢದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಎರಡನೇ ಬಾರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.
ಸೌತ್ಫಸ್ಟ್ ವೆಬ್ಸೈಟ್ ನಡೆಸಿರುವ ಪೀಪಲ್ಸ್ ಪಲ್ಸ (ಜನರ ನಾಡಿಮಿಡಿತ) ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಎರಡನೇ ಬಾರಿಯೂ ಪ್ರಚಂಡ ಬಹುಮತದ ಅಂದಾಜು ಮಾಡಲಾಗಿದೆ.
ಜೂನ್ ತಿಂಗಳಲ್ಲಿ 1 ತಿಂಗಳು ನಡೆಸಿದ ಸಮೀಕ್ಷೆಯ ಅಂಕಿಅಂಶವನ್ನು ಸೌತ್ಫಸ್ಟ್ ಪ್ರಕಟಿಸಿದೆ.
ಈ ಸಮೀಕ್ಷೆಯ ಪ್ರಕಾರ 90 ವಿಧಾನಸಭಾ ಬಲಾಬಲದ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಬರೋಬ್ಬರೀ 53 ರಿಂದ 60 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಬಿಜೆಪಿ ಕಾಂಗ್ರೆಸ್ನಿಂದ ಬಹುದೂರ ಇರಲಿದ್ದು ಕೇವಲ 20ರಿಂದ 27 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಛತ್ತೀಸ್ಗಢದಲ್ಲಿ ಸರ್ಕಾರ ರಚನೆಗೆ 46 ಶಾಸಕರ ಬೆಂಬಲ ಅಗತ್ಯ.
ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಶೇಕಡಾ 46ರಷ್ಟು ಮತಗಳನ್ನು ಪಡೆದರೆ, ಬಿಜೆಪಿ ಶೇಕಡಾ 38ರಷ್ಟು ಮತಗಳನ್ನು ಪಡೆಯಲಿದೆ.
ಮುಖ್ಯಮಂತ್ರಿ ಭೂಪೇಂದ್ರ ಬಘೇಲ್ ಅವರ ಜನಪ್ರಿಯತೆ, ಛತ್ತೀಸ್ಗಢದ ಅಸ್ಮಿಯತೆ ಅಸ್ತ್ರ, ಪಶುಪಾಲಕರಿಂದ ನೇರವಾಗಿ ಸರ್ಕಾರವೇ ಸಗಣಿ ಖರೀದಿ ಮಾಡುತ್ತಿರುವ ಯೋಜನೆಗಳೆಲ್ಲವೂ ಕಾಂಗ್ರೆಸ್ಗೆ ವರದಾನವಾಗಿದೆ.
ADVERTISEMENT
ADVERTISEMENT