Assembly Election: ಛತ್ತೀಸ್​ಗಢದಲ್ಲಿ ಕಾಂಗ್ರೆಸ್​​ಗೆ ಪ್ರಚಂಡ ಜಯದ ನಿರೀಕ್ಷೆ

ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ (Assembly Election) ನಡೆಯಲಿರುವ ಛತ್ತೀಸ್​ಗಢ (Chattisgarh) ರಾಜ್ಯದ ಚುನಾವಣಾ ಚಿತ್ರಣ ಸಂಬಂಧ ಪ್ರಮುಖ ಚುನಾವಣಾ ಸಮೀಕ್ಷಾ ಸಂಸ್ಥೆ ಲೋಕ್​ಪೋಲ್​ (Lokpoll) ತನ್ನ ಹೊಸ ಸಮೀಕ್ಷೆಯನ್ನು (Assembly Survey) ಪ್ರಕಟಿಸಿದೆ.

ಕಾಂಗ್ರೆಸ್ (Congress)​ ಶೇಕಡಾ 43ರಿಂದ 45ರಷ್ಟು ಮತಗಳನ್ನು ಪಡೆಯಬಹುದು. ಬಿಜೆಪಿ (BJP) ಶೇಕಡಾ 37ರಿಂದ 39ರಷ್ಟು ಮತಗಳನ್ನು ಪಡೆಯಬಹುದು ಮತ್ತು ಬಿಎಸ್​ಪಿ (BSP) ಶೇಕಡಾ 4ರಿಂದ 6ರಷ್ಟು ಮತಗಳನ್ನು ಪಡೆಬಹುದು ಮತ್ತು ಜೆಸಿಸಿ (JCC) ಶೇಕಡಾ 3ರಿಂದ 5ರಷ್ಟು ಮತಗಳನ್ನು ಪಡೆಬಹುದು ಎಂದು ಅಂದಾಜಿಸಲಾಗಿದೆ.

ಈ ಶೇಕಡಾವಾರು ಮತಗಳನ್ನು ಸೀಟುಗಳಿಗೆ ಬದಲಾಯಿಸದರೆ ಆಗ

ಕಾಂಗ್ರೆಸ್​ 56ರಿಂದ 60 ಸೀಟುಗಳನ್ನು ಗೆಲ್ಲಬಹುದು. ಬಿಜೆಪಿ ಕೇವಲ 25ರಿಂದ 29 ಸೀಟುಗಳನ್ನು ಗೆಲ್ಲಬಹುದು. ಬಿಎಸ್​ಪಿ 1-2 ಸೀಟುಗಳನ್ನು ಗೆಲ್ಲಬಹುದು ಹಾಗೂ ಜೆಸಿಸಿ 0-1 ಸ್ಥಾನಗಳನ್ನು ಗೆಲ್ಲಬಹುದು.

ಜೂನ್​ 1ರಿಂದ ಜುಲೈ 5ರವರೆಗೆ 1 ತಿಂಗಳು ನಡೆಸಿರುವ ಚುನಾವಣಾ ಸಮೀಕ್ಷೆಯ ಪ್ರಕಾರ ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ ಮುಖ್ಯಮಂತ್ರಿ ಭೂಪೇಶ್​ ಬಘೇಲ್​ (CM Bhupesh Baghel) ನೇತೃತ್ವದಲ್ಲಿ ಸತತ ಎರಡನೇ ಬಾರಿ ಪ್ರಚಂಡ ಜಯದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here