ದುಡ್ಡು ಮಾತ್ರವೇ ಸರ್ವಸ್ವ ಅಲ್ಲ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ದುಡ್ಡೇ ದೊಡ್ಡಪ್ಪ. ಕೈಯಲ್ಲಿ ದುಡ್ಡಿದ್ದರೇ ಜೀವನದ ಶೇಕಡಾ 70ರಷ್ಟು ಸಮಸ್ಯೆಗಳು ಪರಿಹಾರ ಆಗುತ್ತವೆ ಎನ್ನುತ್ತಾರೆ. ದುಡ್ಡಿರುವ ಕಡೆ ಸಮಸ್ಯೆಗಳು ಉದ್ಭವವಾಗುತ್ತವೆ ಸಹ. ಆದರೆ ದುಡ್ಡಿನ ವಿಚಾರವಾಗಿ ಚಾಣಕ್ಯ ಹೇಳಿದ್ದೇನು ಎಂಬುದನ್ನು ನೋಡಿ.
ಉಳಿತಾಯ ಮಾಡಬೇಕು
ಮುಂಬರುವ ಕಷ್ಟದ ದಿನಗಳನ್ನು ಅಂದಾಜಿಸಿ, ಮೊದಲೇ ಹಣ ಉಳಿತಾಯ ಮಾಡಬೇಕು. ಉಳಿತಾಯ ಮಾಡಬೇಕಾದ ಹಣವನ್ನು ಖರ್ಚು ಮಾಡಬೇಕಾಗಿ ಬಂದರೂ, ಅಗತ್ಯವಿರುವಷ್ಟೇ ಖರ್ಚು ಮಾಡಬೇಕು.
ಗೌರವ ಕೊಡಬೇಕು
ಸಂಪತ್ತು ಎನ್ನುವುದು ಜೀವನದ ಒಂದು ಭಾಗ. ಇದು ಮನುಷ್ಯನಿಗೆ ಗೌರವ ತಂದು ಕೊಡುತ್ತದೆ. ಊಹಿಸದ ವಿಪತ್ತುಗಳನ್ನು ಎದುರಿಸಲು ನೆರವಾಗುತ್ತದೆ.ಹೀಗಾಗಿ
ಹಣಕ್ಕೂ ನಾವು ಗೌರವ ಕೊಡಬೇಕು.
ದುಡ್ಡಿರುವ ಕಡೆಯೇ ಇರಿ
ಕೆಲಸ, ಗೌರವ, ಶ್ರೇಯೋಭಿಲಾಷಿಗಳು, ಶಿಕ್ಷಣ ಇಲ್ಲದ ಕಡೆ ವಾಸ ಮಾಡುವುದರಿಂದ ಉಪಯೋಗ ಇಲ್ಲ. ಸಂಪನ್ನರು, ವ್ಯಾಪಾರಿಗಳು, ಸುಶಿಕ್ಷಿತರು, ಸೈನಿಕರು, ನದಿಗಳು, ವೈದ್ಯರು ಇರುವ ಕಡೆ ಮನುಷ್ಯರು ಬದುಕಬೇಕು.
ನಿಜಾಯಿತಿಗೆ ಪರೀಕ್ಷೆ
ದುಡ್ಡು ಅಥವಾ ಆಸ್ತಿಯನ್ನು ಕಳೆದುಕೊಂಡಾಗ ನಿಮ್ಮ ಪತ್ನಿ/ಪತಿಯ ಅಸಲಿ ಮುಖ ಅನಾವರಣ ಆಗುತ್ತದೆ.
ಹಣದ ನೆರವಿನೊಂದಿಗೆ ನಿಮ್ಮ ಸ್ನೇಹಿತರು, ಸೇವಕರನ್ನು ಪರೀಕ್ಷೆಗೆ ಒಳಪಡಿಸಿ. ಆಗ ಅವರ ನಿಯತ್ತು, ನಿಜಾಯಿತಿ ಗೊತ್ತಾಗುತ್ತದೆ.
ತ್ಯಾಗ ಅಗತ್ಯ
ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ದಾನ ಧರ್ಮಗಳಿಗೆ ವಿನಿಯೋಗಿಸಬೇಕು. ಅಗತ್ಯ ಬಿದ್ದಾಗ ಧನವನ್ನು ತ್ಯಾಗ ಮಾಡಬೇಕು