ಬಿಜೆಪಿ ವಿರುದ್ಧ ಮಾತಾಡಿದ್ದ ಚಕ್ರವರ್ತಿ ಸೂಲಿಬೆಲೆಗೆ ಅಧ್ಯಕ್ಷ ಸ್ಥಾನಮಾನ ಕೊಟ್ಟು ಗೌರವ

ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರಿಗೆ ಬಿಜೆಪಿ (BJP) ಸರ್ಕಾರ ಸೂಕ್ತ ಸ್ಥಾನಮಾನ ನೀಡಿದೆ.

ಶ್ರೀ ಗಳಗನಾಥ ಮತ್ತು ನಾ ಶ್ರೀ ರಾಜಪುರಹೋಹಿತ ಪ್ರತಿಷ್ಠಾನ, ಹಾವೇರಿ ಇದರ ಅಧ್ಯಕ್ಷರನ್ನಾಗಿ ಸೂಲಿಬೆಲೆ ಅವರನ್ನು ನೇಮಕ ಮಾಡಿದೆ.

ಈ ಮೂಲಕ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಬಹಿರಂಗವಾಗಿ ಟೀಕೆ-ಟಿಪ್ಪಣಿಗಳನ್ನು ಮಾಡಿದ್ದ ಸೂಲಿಬೆಲೆ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಲಾಗಿದೆ.

ಈ ಪ್ರತಿಷ್ಠಾನದಲ್ಲಿ 7 ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳನ್ನೂ ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here