ಬೆಂಗಳೂರಿನಲ್ಲಿ ಚಡ್ಡಿ ಗ್ಯಾಂಗ್​ ಅಟ್ಟಹಾಸ; ಆತಂಕ ಶುರು

ಇಷ್ಟು ದಿನ ವಿಶಾಖಪಟ್ಟಣ ಮತ್ತಿತ್ತರ ಕಡೆ ಮಾತ್ರ ಸದ್ದು ಮಾಡುತ್ತಿದ್ದ ಚಡ್ಡಿ ಗ್ಯಾಂಗ್ ಇದೀಗ ಬೆಂಗಳೂರಿಗೂ ಎಂಟ್ರಿ ಕೊಟ್ಟಿದ್ದು, ನಗರದ ಹೊರವಲಯದ ಪ್ರತಿಷ್ಠಿತ ಏರಿಯಾಗಳನ್ನು ಟಾರ್ಗೆಟ್​ ಮಾಡುತ್ತಿದೆ.

ಸರ್ಜಾಪುರದ ದೊಡ್ಡ ತಿಮ್ಮಸಂದ್ರದಲ್ಲಿರುವ ಮೆಟ್ರೊಪೊಲೀಸ್ ಫೇರ್ ಓಕ್ಸ್, ಗಟ್ಟಿಹಳ್ಳಿಯ ಪಯೋನೀರ್ ಲೇಕ್ ಡಿಸ್ಟ್ರಿಕ್ಟ್ ವಿಲ್ಲಾಗಳು ಸೇರಿ ಹಲವೆಡೆ ಲಗ್ಗೆ ಹಾಕುತ್ತಿದೆ

ಕಳೆದ ಎರಡ್ಮೂರು ತಿಂಗಳಿಂದ ರಾತ್ರಿ ಆಯಿತು ಎಂದರೇ ಸಾಕು ಐದಾರು ಮಂದಿಯ ಚಡ್ಡಿ ಗ್ಯಾಂಗ್​ ವಿಲ್ಲಾಗಳಿರುವ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ.

ಮುಖಕ್ಕೆ ಕರ್ಚೀಫ್​ ಕಟ್ಟಿಕೊಂಡು ಬನಿಯನ್​, ಚಡ್ಡಿಯಲ್ಲಿ ಕಾಣಿಸಿಕೊಳ್ಳುವ ಈ ಗ್ಯಾಂಗ್ ಕೈಯಲ್ಲಿ ಟಾರ್ಚ್ ಮತ್ತು ಮಾರಕಾಸ್ತ್ರಗಳು ಇರುತ್ತವೆ. ಬೀಗ ಹಾಕಿದ ಮನೆ ಯಾವುದು ಎಂಬುದನ್ನು ಗಮನಿಸಿ ಆ ಮನೆಗೆ ಲಗ್ಗೆ ಹಾಕಲು ಪ್ರಯತ್ನಿಸುತ್ತದೆ. ಸ್ವಲ್ಪ ಅನುಮಾನ ಬಂದರೂ ಸಾಕು ಸದ್ದಿಲ್ಲದೇ ಎಸ್ಕೇಪ್ ಆಗುತ್ತದೆ.

ವಿಶೇಷ ಅಂದರೆ ಈ ಗ್ಯಾಂಗ್​ನ ಯಾರು ಕೂಡ ಕಾಲಿಗೆ ಚಪ್ಪಲಿ/ಶೂ ಕೂಡ ಹಾಕಿಕೊಂಡಿರಲ್ಲ. ಚಡ್ಡಿಗ್ಯಾಂಗ್​ನ ಚಲನವಲನಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸರ್ಜಾಪುರದ ಸುತ್ತಮುತ್ತ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಪೂರ್ವ ಬೆಂಗಳೂರಿನ ಸಿಟಿಜನ್ಸ್ ಫೋರಂ ಟ್ವಿಟ್ಟರ್ ಖಾತೆ ಮೂಲಕ ಚಡ್ಡಿ ಗ್ಯಾಂಗ್ ವಿರುದ್ಧ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here