ನಯನ್ ಮದುವೆಗೆ ಮುನ್ನವೇ ಡೈವೋರ್ಸ್ ಮಾತು.. ಇದೇನು ಸ್ವಾಮಿ?

ಸೆಲೆಬ್ರಿಟಿಗಳ ಜ್ಯೋತಿಷ್ಯ ಹೇಳುವ ಮೂಲಕ ಫುಲ್ ಫೇಮಸ್ ಆದ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ, ಈಗ ಖ್ಯಾತ ನಟಿ ಯೊಬ್ಬರ ವೈವಾಹಿಕ ಜೀವನದ ಬಗ್ಗೆ ಹೇಳಿರುವ ಭವಿಷ್ಯ ಟಾಕ್ ಆಫ್ ದ್ ಟೌನ್ ಆಗಿದೆ.

ಸಮಂತಾ- ನಾಗ ಚೈತನ್ಯ ಮದ್ವೆಗೆ ಮುನ್ನವೇ ಅವರ ಕಲ್ಯಾಣ ಬಂಧ ತುಂಬಾ ವರ್ಷ ಉಳಿಯಲ್ಲ ಎಂದು ವೇಣು ಸ್ವಾಮಿ ಹೇಳಿದ್ದು ಅಕ್ಷರಶಃ ನಿಜವಾಗಿತ್ತು. ಈಗ ಮತ್ತೊಬ್ಬ ನಟಿ ನಯನತಾರ ವಿಚಾರದಲ್ಲೂ ಇಂಥಾದ್ದೆ ಭವಿಷ್ಯವನ್ನು ವೇಣು ಸ್ವಾಮಿ ಹೇಳಿದ್ದಾರೆ.

ಈಗಾಗ್ಲೇ ಲವ್ ಲೈಫಲ್ಲಿ ಸಿಕ್ಕಾಪಟ್ಟೆ ನೋವುಂಡು ಕಳೆದ ಐದು ವರ್ಷದಿಂದ ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಯಲ್ಲಿ ನೆಮ್ಮದಿ ಕಂಡಿದ್ದ ಲೇಡಿ ಸೂಪರ್ ಸ್ಟಾರ್ ನಯನತಾರ ಜೂನ್ 9ರಂದು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮದುವೆಯಾಗಲು ತೀರ್ಮಾನಿಸಿದ್ದಾರೆ. ಆದರೆ ಅವರು ಮದುವೆಯಾದರೂ ಅವರ ವೈವಾಹಿಕ ಬದುಕು ಸುಗಮವಾಗಿ ಇರಲ್ಲ. ಡೈವೋರ್ಸ್​ ಗೂ ಕೂಡಾ ದಾರಿ ಮಾಡಿಕೊಡಬಹುದು ಎಂಬ ಭವಿಷ್ಯವನ್ನು ವೇಣು ಸ್ವಾಮಿ ನುಡಿದಿದ್ದಾರೆ. ಅಸಲಿಗೆ ನಯನತಾರ ಜಾತಕಕ್ಕೆ ಮದ್ವೆ ಎಂಬ ಪದವೇ ಆಗಿಬರಲ್ಲ. ನಯನತಾರ ಜಾತಕದಲ್ಲಿ ಗುರು ನೀಚ ಸ್ಥಾನದಲ್ಲಿದ್ದು, ಇದು ಅವರ ಸಂಸಾರದ ಬದುಕಿಗೆ ತೊಡಕುಂಟು ಮಾಡಲಿದೆ ಎಂದಿದ್ದಾರೆ.

ಬರೀ ನಯನತಾರ ವೈವಾಹಿಕ ಜೀವನದ ಬಗ್ಗೆ ವೇಣು ಸ್ವಾಮಿ ಜ್ಯೋತಿಷ್ಯ ಹೇಳಿಲ್ಲ.
ಲೇಡಿ ಸೂಪರ್ ಸ್ಟಾರ್ ನಯನ್ ಜೊತೆಗೆ ಜೇಜಮ್ಮ ಖ್ಯಾತಿಯ ಸ್ವೀಟಿ ಅನುಷ್ಕಾ ಶೆಟ್ಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣರ ಮದುವೆ ಬಂಧ ಕೂಡಾ ಗಟ್ಟಿಯಾಗಿ ಇರಲ್ಲ. ಅವರ ವೈವಾಹಿಕ ಮದುವೆ ಬದುಕಿನ ಹಾದಿಯೆ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ಸಂಸಾರಿಕ ಬದುಕಿನಲ್ಲಿ ಯಶಸ್ಸು ಸಿಗಲ್ಲ. ಒಂದು ಹಂತದಲ್ಲಿ ಇವರ ಕಲ್ಯಾಣ ಮುರಿದು ಬೀಳಬಹುದು.. ಕಾರಣ ಇವರೆಲ್ಲರ ಜಾತಕದಲ್ಲಿ ಗುರು ನೀಚ ಸ್ಥಾನದಲ್ಲಿ ಇದ್ದಾನೆ. ಇದು ಸರಿ ಹೋಗುವ ಕತೆಯಲ್ಲ ಎಂದು ವೇಣು ಸ್ವಾಮಿ ಶಾಕಿಂಗ್ ಭವಿಷ್ಯ ಹೇಳಿದ್ದಾರೆ.

ನಯನತಾರ, ಅನುಷ್ಕಾ, ರಶ್ಮಿಕಾ, ಸಮಂತಾ ಜಾತಕಗಳಲ್ಲಿ 6 ಅಥವಾ 12 ಸ್ಥಾನದಲ್ಲಿ ಕುಜ, ಶನಿ, ಗುರು ಇದ್ದಾರೆ. ಹೀಗಾಗಿ ಇವರಿಗೆ ಮದುವೆ ಆದರೂ, ವೈವಾಹಿಕ ಜೀವನದಲ್ಲಿ ಸಂತಸ ಎಂಬುದು ಇರಲ್ಲ ಎಂದು ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ತಿಳಿಸಿದ್ದಾರೆ. ನಟಿ ಸಮಂತಾ ವಿಚಾರಕ್ಕೆ ಬಂದರೆ, ಶನಿ ದೃಷ್ಟಿ ಕುಜನ ಮೇಲಿದ್ದ ಕಾರಣ ಅವರ ಮದುವೆ ಬಂಧ ಮುರಿದುಬಿತ್ತು ಎಂದು ವಿವರ ನೀಡಿದ್ದಾರೆ.

ಬರೀ ನಾಯಕಿಯರದ್ದು ಮಾತ್ರವಲ್ಲ ರೆಬೆಲ್ ಸ್ಟಾರ್ ಪ್ರಭಾಸ್ ಗ್ರಹಗತಿ ಚನ್ನಾಗಿಲ್ಲವಂತೆ. ಅವರ ವೈವಾಹಿಕ ಬದುಕು ಸುಖಮಯ ಆಗಿರಲ್ಲ ಎಂದು ವೇಣುಸ್ವಾಮಿ ಭವಿಷ್ಯದ ಬಾಂಬ್ ಸಿಡಿಸಿದ್ದಾರೆ.

ನ್ಯಾಷನಲ್ ಕ್ರಶ್​ ರಷ್ಮಿಕಾ.. ನೀಲ ಕಾಲ್ಗಳ ಚೆಲುವೆ ಪೂಜಾ ಹೆಗ್ಡೆಗೂ ಶಾಕ್

ಸದ್ಯ ಟಾಲಿವುಡ್ ನಲ್ಲಿ ಬಿಡುವಿಲ್ಲದೇ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಸಮಂತಾ, ಕನ್ನಡತಿಯರಾದ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಕರಿಯರ್ ಇನ್ನೆರಡು ವರ್ಷ ಅಷ್ಟೇ.. ೨೦೨೪ರ ನಂತರ ಅವರಿಗೆ ಆಫರ್ ಕಡಿಮೆ ಆಗುತ್ತವೆ. 2024ರಲ್ಲಿ ಬೇರೆ ಚೆಲುವೆಯರು ಮುನ್ನೆಲೆಗೆ ಬರುತ್ತಾರೆ. ಅಷ್ಟರಲ್ಲಿ ಈ ನಟಿಯರು ಸೆಟಲ್ ಆಗಬೇಕು ಎಂಬ ಸಲಹೆಯನ್ನು ಜ್ಯೋತಿಷಿ ವೆಣು ಸ್ವಾಮಿ ನೀಡಿದ್ದಾರೆ.

LEAVE A REPLY

Please enter your comment!
Please enter your name here