ಡಿಕೆಶಿ ಆಪ್ತರಿಗೆ CBI ವಿಚಾರಣೆಗೆ ಬರಲು ಸೂಚನೆ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಆಪ್ತ ವಿಜಯ್ ಮುಳಗುಂದ್ ಅವರಿಗೆ CBI ನೋಟಿಸ್ ಜಾರಿ ಮಾಡಿದೆ.

ಆಗಸ್ಟ್ 30ರಂದು ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ವಿಚಾರಣೆಗೆ ಹಾಜರಾಗುವ ವೇಳೆ ಹಣಕಾಸು ವ್ಯವಹಾರ ಕುರಿತ ಅಗತ್ಯ ದಾಖಲೆಗಳನ್ನು ತರುವಂತೆ ಸೂಚಿಸಿದೆ.

2020ರ ಅಕ್ಟೋಬರ್ 5ರಂದು ಡಿ ಕೆ ಶಿವಕುಮಾರ್ ಮತ್ತು ಅವರ ಆಪ್ತರ ಮೇಲೆ CBI ದಾಳಿ ನಡೆಸಿತ್ತು.

2013ರಿಂದ 2018ರವರೆಗೆ ಶಾಸಕ ಮತ್ತು ಸಚಿವರಾಗಿದ್ದ ಅವಧಿಯಲ್ಲಿ ಡಿ ಕೆ ಶಿವಕುಮಾರ್ 74 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿದ್ದರು ಎಂದು ಸಿಬಿಐ FIR ದಾಖಲಿಸಿತ್ತು.

LEAVE A REPLY

Please enter your comment!
Please enter your name here