ಉತ್ತರಾಖಂಡ್ನ ರಾಮನಗರ ಎಂಬಲ್ಲಿ ನದಿಯಲ್ಲಿ ಕಾರಿ ಕೊಚ್ಚಿ ಹೋಗಿದ್ದು, 9 ಜನ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ಕಳೆದ ತಿಂಗಳಿನಿಂದ ಭಾರತದ ಉತ್ತರ ಹಾಗೂ ಈಶಾನ್ಯ ಭಾಗದಲ್ಲಿ ತೀವ್ರ ಮಳೆಯಾಗುತ್ತಿದೆ. ಮಳೆಯಿಂದು ಉಂಟಾದ ಪ್ರವಾಹ, ಭೂಕುಸಿತಕ್ಕೆ ಹಲವು ಜನ ಸಿಕ್ಕು ಸಾವನ್ನಪ್ಪಿದ್ದಾರೆ.
ಇದೀಗ, ಉತ್ತರಾಖಂಡ್ನ ಧೇಲಾ ನದಿಯಲ್ಲಿ ಕಾರೊಂದು ಕೊಚ್ಚಿಕೊಂಡು ಹೋಗಿದೆ. 9 ಜನ ಅಸುನೀಗಿದ್ದು, 5 ಜನ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತೀವ್ರ ಮಳೆಯಿಂದ ಇಂದು ಬೆಳಗಿನ ಜಾವ ಈ ದುರ್ಘಟನೆ ನಡೆದಿದೆ ಎಂದು ಕುಮೌನ್ ವಲಯದ ಡಿಐಜಿ ಆನಂದ್ ಭರನ್ ತಿಳಿಸಿದ್ದಾರೆ.
ಇನ್ನು, ಉತ್ತರ ದೆಹಲಿಯ ಯಮುನಾ ನದಿಯ ನೀರಿನಲ್ಲಿ ಮೂವರು ಯುವಕರು ನೀರುಪಾಲಾಗಿದ್ದಾರೆ.