ಮಹತ್ವದ ಬೆಳವಣಿಗೆಯಲ್ಲಿ ನಿನ್ನೆಯಷ್ಟೇ ನಡೆದಿದ್ದ ಜೂನ್ ಸಾಲಿನ ಯುಜಿಸಿ-ನೆಟ್ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಜೂನ್ 18ರಂದು ಅಂದರೆ ಮಂಗಳವಾರ ಎರಡು ಹಂತಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಈ ವರ್ಷದ ಜೂನ್ ಸಾಲಿನ ಯುಜಿಸಿ-ನೆಟ್ ಪರೀಕ್ಷೆಯನ್ನು ನಡೆಸಿತ್ತು.
ಆದರೆ ಇವತ್ತು ವಿಶ್ವವಿದ್ಯಾಲಯ ಧನವಿನಿಯೋಗ ಆಯೋಗಕ್ಕೆ ರಾಷ್ಟ್ರೀಯ ಸೈಬರ್ ಅಪರಾಧಳ ಆತಂಕ ವಿಶ್ಲೇಷಣಾ ಘಟಕ (ಕೇಂದ್ರ ಗೃಹ ಸಚಿವಾಲಯದ ಆಧೀನದಲ್ಲಿರುವ ಬರುವ ಘಟಕ)ದಿಂದ ಯುಜಿಸಿ-ನೆಟ್ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿ ಲಭ್ಯವಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ಪರೀಕ್ಷೆಯಲ್ಲಿ ಮೇಲ್ನೋಟಕ್ಕೆ ಅಕ್ರಮ ಎಸಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಪರೀಕ್ಷೆಯ ಪಾವಿತ್ರ್ಯತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಶಿಕ್ಷಣ ಸಚಿವಾಲಯ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಹೊಸದಾಗಿ ರಾಷ್ಟ್ರಾದ್ಯಂತ ಮರು ಪರೀಕ್ಷೆ ನಡೆಸಲಾಗುವುದು.
ಜೊತೆಗೆ ಯುಜಿಸಿ-ನೆಟ್ನ ಜೂನ್ ಸಾಲಿನ ಪರೀಕ್ಷಾ ಅಕ್ರಮದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.
ADVERTISEMENT
ADVERTISEMENT