ಲಕ್ಷ್ಮೀ ಕೋ.ಅಪರೇಟಿವ್​ ಬ್ಯಾಂಕ್ ಪರವಾನಗಿ ರದ್ದು – 5 ಲಕ್ಷ ಕ್ಲೇಮ್​ಗೆ ಅವಕಾಶ

Laxmi Co Operative Bank

ಮಹಾರಾಷ್ಟ್ರದ ಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್​ನ (Laxmi Co Operative Bank) ಪರವಾನಗಿಯನ್ನು ರದ್ದು ಮಾಡಿ ಇಂದು ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್(RBI) ಆದೇಶ ಹೊರಡಿಸಿದೆ. ಸೋಲಾಪುರ ಮೂಲದ ಈ ಬ್ಯಾಂಕ್​ಗೆ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆ ಇಲ್ಲ. ನಿಯಮಗಳಿಗೂ ಬದ್ಧವಾಗಿಲ್ಲ ಎಂದು ಆರ್​ಬಿಐ ತಿಳಿಸಿದೆ.

ಆರ್​ಬಿಐ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ.

ಬ್ಯಾಂಕ್​​ನ ಪರವಾನಗಿ ರದ್ದು ಮಾಡಿ ಆದೇಶ ಹೊರಡಿಸಿರುವ ಆರ್​ಬಿಐ, ಮಹಾರಾಷ್ಟ್ರದ ಸೋಲಾಪುರದಲ್ಲಿ ಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ (Laxmi Co Operative Bank) ಇಂದಿನಿಂದ ಬ್ಯಾಂಕಿಂಗ್ ವ್ಯವಹಾರಗಳಾದ ಠೇವಣಿ ಸ್ವೀಕಾರ ಮತ್ತು ಠೇವಣಿಗಳ ಮರುಪಾವತಿ ಮಾಡುವಂತಿಲ್ಲ ಎಂದು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಈ ಬಗ್ಗೆ ಮಹಾರಾಷ್ಟ್ರದ ಸಹಕಾರಿ ಸಂಘದ ಆಯುಕ್ತರಿಗೆ ನಿರ್ದೇಶಿಸಿರುವ ಆರ್​ಬಿಐ, ಈ ಬ್ಯಾಂಕನ್ನು ಮುಚ್ಚಲು ಮತ್ತು ಬ್ಯಾಂಕಿಗೆ ಒಬ್ಬ ಲಿಕ್ವಿಡೇಟರ್ (ಮಧ್ಯವರ್ತಿ)ನನ್ನು ನೇಮಕ ಮಾಡಲು ತಿಳಿಸಿದೆ.

ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ ಪ್ರತಿ ಠೇವಣಿದಾರರು 5 ಲಕ್ಷಗಳ ವರೆಗಿನ ಠೇವಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ಶೇ.99 ಪ್ರತಿಶತದಷ್ಟು ಠೇವಣಿದಾರರು ಮರಳಿ ತಮ್ಮ ಹಣ ಪಡೆಯುತ್ತಾರೆ ಎಂದು ಆರ್​ಬಿಐ ಹೇಳಿದೆ. ಇದನ್ನೂ ಓದಿ : RBI ಹೆಸರೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ… ವ್ಯಾಪಾರಿ ಬುದ್ದಿ ಬೇಡ… ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್