ಜೀಪ್​-ಕಾರು ಅಪಘಾತ- ಕಾರಿನಲ್ಲಿ C T ರವಿ ಭಾವಚಿತ್ರ ಇರುವ ಕ್ಯಾಲೆಂಡರ್​, ಮದ್ಯದ ಪ್ಯಾಕೆಟ್​, ಲಾಂಗ್​ ಪತ್ತೆ

ಜೀಪ್​​ಗೆ ಡಿಕ್ಕಿ ಹೊಡೆದು ಮಾರುತಿ ಓಮಿನಿ ಕಾರಿನಲ್ಲಿ ಚಿಕ್ಕಮಗಳೂರು ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಭಾವಚಿತ್ರ ಇರುವ ಕ್ಯಾಲೆಂಡರ್​, ಮದ್ಯದ ಪ್ಯಾಕೆಟ್​ಗಳು ಮತ್ತು ಲಾಂಗ್​ ಪತ್ತೆಯಾಗಿದೆ.

ಚಿಕ್ಕಮಗಳೂರು ನಗರ ಎಐಟಿ ಸರ್ಕಲ್​ನಲ್ಲಿ ಜೀಪ್​ಗೆ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರೇ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರನ್ನು ಪರಿಶೀಲಿಸಿದಾಗ ಸಿ ಟಿ ರವಿ ಭಾವಚಿತ್ರ ಇರುವ ಕ್ಯಾಲೆಂಡರ್​, ಮದ್ಯದ ಬಾಟಲ್​, ಲಾಂಗ್​ ಪತ್ತೆ ಆಗಿದೆ.

ಸಿ ಟಿ ರವಿ, ಓಟಿ ರವಿಗೆ ಧಿಕ್ಕಾರ ಎಂದು ಸ್ಥಳೀಯರು ಘೋಷಣೆ ಕೂಗಿದ್ದಾರೆ.