ಅಸಹ್ಯ ಸರ್ಕಾರಕ್ಕೆ ಪವಿತ್ರತೆಯ ಮುದ್ರೆ – ಫಲಿತಾಂಶಕ್ಕೆ ಕುಮಾರಸ್ವಾಮಿ ವ್ಯಂಗ್ಯ

ಉಪ ಚುನಾವಣೆಯಲ್ಲಿ ಭದ್ರಕೋಟೆಯನ್ನೇ ಕಳೆದುಕೊಂಡು ಸೊನ್ನೆ ಸುತ್ತಿ ಕಂಗೆಟ್ಟಿರುವ ಜೆಡಿಎಸ್‌ ಮತದಾರರ ಆದೇಶದ ಬಗ್ಗೆ ಆಘಾತ ವ್ಯಕ್ತಪಡಿಸಿದೆ. 

ಇದೊಂದು “ಅಸಹ್ಯ” ಸರ್ಕಾರ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಮೂದಲಿಸಿದ್ದ ಮಾತಿಗೆ ಸಹಮತ ವ್ಯಕ್ತಪಡಿಸುವಂತೆ ರಾಜ್ಯದ 15 ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ‘ಪವಿತ್ರ’ ಮತ್ತು ‘ಸುಭದ್ರ’ ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಮನದಾಳದ ಅಭಿನಂದನೆಗಳು

ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್‌ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಜನರ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ:

ಮತದಾರರ ತೀರ್ಪನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಪಕ್ಷಾಂತರಿಗಳನ್ನು ಮತದಾರರು ಒಪ್ಪಿಕೊಂಡಿದ್ದಾರೆ. ನಾವು ಸೋಲನ್ನು ಒಪ್ಪಿಕೊಳ್ಳುತ್ತೇವೆ. ಆದರೆ ನಾವು ಧೃತಿಗೇಡಬೇಕಾದ ಅಗತ್ಯವಿಲ್ಲ 

ಎಂದು ಕಾಂಗ್ರೆಸ್‌ ನಾಯಕ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

ಮಾಡಿದ್ದುಣ್ಣೋ ಮಹರಾಯ:

ಎಂದು ನಟ ಪ್ರಕಾಶ್‌ ರೈ ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here