ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ಗೆ ಮೂರು ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ.
ಭಾರತದ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದೆ.
ಇದೇ ತಿಂಗಳ ಅಂದ್ರೆ ಜೂನ್ 30ರಂದು ಮತದಾನ ನಡೆಯಲಿದ್ದು, ಅವತ್ತೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರು ಮತ್ತು ಆರ್ ಶಂಕರ್ ಅವರ ರಾಜೀನಾಮೆಯಿಂದ ಪರಿಷತ್ ಸ್ಥಾನ ಖಾಲಿಯಾಗಿತ್ತು.
ಈ ಮೂವರು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು.
ಜೂನ್ 13ರಂದು ಉಪ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಜೂನ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ವಾಪಸ್ಗೆ ಕೊನೆಯ ದಿನ.
ಜೂನ್ 30ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಶಾಸಕರು ಮತದಾನ ಮಾಡಲಿದ್ದಾರೆ.
ಬಾಬುರಾವ್ ಚಿಂಚನಸೂರು ಅವರ ಸದಸ್ಯತ್ವ ಅವಧಿ 2024ರ ಜೂನ್ 17ಕ್ಕೆ, ಆರ್ ಶಂಕರ್ ಜೂನ್ 30, 2026ಕ್ಕೆ ಮತ್ತು ಲಕ್ಷ್ಮಣ ಸವದಿ ಸದಸ್ಯತ್ವ ಅವಧಿ ಜೂನ್ 14, 2028ಕ್ಕೆ ಮುಗಿಯಬೇಕಿತ್ತು.
ಆದರೆ ಕಾಂಗ್ರೆಸ್ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇವರಲ್ಲಿ ಸವದಿ ಮಾತ್ರ ಅಥಣಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಗುರುಮಿಟ್ಕಲ್ನಿಂದ ಸ್ಪರ್ಧಿಸಿದ್ದ ಚಿಂಚನಸೂರು ಸೋತಿದ್ದರು.
ADVERTISEMENT
ADVERTISEMENT