ತ್ರಿಪುರಾ ಆಡಳಿತ ಪಕ್ಷದ ಹಿರಿಯ ಶಾಸಕ ಬುರ್ಬಾ ಮೋಹನ್ (Burba Mohan Tripura) ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಕಾರ್ಬುಕ್ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಹಿರಿಯ ನಾಯಕ ಬುರ್ಬಾ ಮೋಹನ್ ತ್ರಿಪುರಾದ ಪ್ರಾದೇಶಿಕ ಪಕ್ಷ ಹಾಗೂ ಬುಡಕಟ್ಟು ಮೂಲದ ಪಕ್ಷವಾದ ತ್ರಿಪಾಹ ಸ್ಥಳೀಯ ಪ್ರಾದೇಶಿಕ ಒಕ್ಕೂಟ (ತ್ರಿಪಾ)ಕ್ಕೆ ಸೇರಲಿದ್ದಾರೆ ಎನ್ನಲಾಗಿದೆ.
ತ್ರಿಪಾ ಮುಖ್ಯಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮನ್ ಅವರೊಂದಿಗೆ ತೆರಳಿದ ಬುರ್ಬಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ರತನ್ ಚಕ್ರವರ್ತಿ ಅವರಿಗೆ ಸಲ್ಲಿಸಿದರು.
ಬುರ್ಬಾ ಅವರು ಬಿಜೆಪಿ ಮತ್ತು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ನಾನು ಅವರ ಜೊತೆಗಿದ್ದೆ. ಅವರು ಈಗ ತ್ರಿಪಾ ಸೇರುತ್ತಾರೆ ಎಂದು ದೇಬ್ ಬರ್ಮನ್ ತಿಳಿಸಿದ್ದಾರೆ.
ಬುರ್ಬಾ ಮೋಹನ್ (Burba Mohan Tripura) ತ್ರಿಪುರಾ ಅವರ ರಾಜೀನಾಮೆ ನಂತರ, 60 ಸದಸ್ಯ ಬಲದ ತ್ರಿಪುರಾ ವಿಧಾಸಭೆಯಲ್ಲಿ ಬಿಜೆಪಿಯ ಸಂಖ್ಯಾ ಬಲ 35ಕ್ಕೆ ಇಳಿದಿದೆ.
ಇದನ್ನೂ ಓದಿ : ಪಿಎಫ್ಐ ಮೇಲೆ ಎನ್ಐಎ ದಾಳಿ ಬೆನ್ನಲ್ಲೇ, ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್