INDIA ಮೈತ್ರಿಕೂಟಕ್ಕೆ BSP ವಿರೋಧ – ಏಕಾಂಗಿ ಸ್ಪರ್ಧೆಗೆ ಮಾಯಾವತಿ ನಿರ್ಧಾರ

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ 26 ವಿರೋಧ ಪಕ್ಷಗಳ INDIA ಮೈತ್ರಿಕೂಟಕ್ಕೆ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯವತಿ ಕಿಡಿಕಾರಿದ್ದಾರೆ.

ಸಮಾನ ಜಾತಿವಾದಿ ಮತ್ತು ಬಂಡವಾಳಶಾಹಿ ಪಕ್ಷಗಳೊಂದಿಗೆ ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುತ್ತಿದೆ. ಬಿಜೆಪಿ ಎನ್​ಡಿಎಯನ್ನು ಬಲಗೊಳಿಸುತ್ತಿದೆ. ಆದರೆ ಅವರ ನೀತಿಗಳು ಮುಸಲ್ಮಾನ ವಿರೋಧಿ ಮತ್ತು ದಲಿತ ವಿರೋಧಿ.

ನಾವು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ. ನಾವು ಏಕಾಂಗಿಯಾಗಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣ, ಹರಿಯಾಣ, ಪಂಜಾಬ್​ ಮತ್ತು ಉಳಿದ ರಾಜ್ಯಗಳಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತೇವೆ, ಸಾಧ್ಯವಾದ್ರೆ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ 

ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಈ ಪಕ್ಷಗಳು ಜನ ಕಲ್ಯಾಣಕ್ಕಾಗಿ ಕೆಲಸ ಮಾಡಲ್ಲ. ಇವರು ದಲಿತರು, ಮುಸಲ್ಮಾನರು ಮತ್ತು ಅಲ್ಪಸಂಖ್ಯಾತರಿಗಾಗಿ ಏನೂ ಮಾಡಿಲ್ಲ. ಎಲ್ಲರೂ ಒಂದೇ. ಅವರು ಅಧಿಕಾರಕ್ಕೆ ಬಂದಾಗ ಭರವಸೆಗಳನ್ನು ಮರೆಯುತ್ತಾರೆ. ಅವರು ಜನರಿಗೆ ಮಾಡಿರುವ ಒಂದೇ ಒಂದು ಭರವಸೆ ಈಡೇರಿಸಿಲ್ಲ, ಅದು ಬಿಜೆಪಿ ಆಗಿರಬಹುದು ಅಥವಾ ಕಾಂಗ್ರೆಸ್​ ಆಗಿರಬಹುದು. ವಿರೋಧ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಇರುವುದಕ್ಕೆ ಇದೇ ದೊಡ್ಡ ಕಾರಣ

ಎಂದು ಮಾಯಾವತಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here