BSF ನೇಮಕಾತಿ: OBC ಅಭ್ಯರ್ಥಿಗಳಿಗೆ ಸಿಗದ ಮೀಸಲಾತಿ – 1,312 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ

BSF
BSF
ಅರಸೇನಾ ಪಡೆ ಗಡಿ ಭದ್ರತಾ ಪಡೆ (BSF) 1,312 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಆದರೆ ರೇಡಿಯೋ ಆಪರೇಟರ್ (Radio Operator) ವಿಭಾಗದ ಹೆಡ್​​ಕಾನ್ಸ್​ಸ್ಟೇಬಲ್​ ಹುದ್ದೆಗಳ ಭರ್ತಿಯಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಒಂದೇ ಒಂದು ಹುದ್ದೆಯನ್ನೂ ಮೀಸಲಿಟ್ಟಿಲ್ಲ.
ರೇಡಿಯೋ ಆಪರೇಟರ್​ ಹೆಡ್​​ ಕಾನ್ಸ್​ಸ್ಟೇಬಲ್​ ಹುದ್ದೆಯಲ್ಲಿ 420 ಸ್ಥಾನಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಎಸ್​ಸಿ ಸಮುದಾಯಕ್ಕೆ 131, ಎಸ್​ಟಿ ಸಮುದಾಯಕ್ಕೆ 110 ಹುದ್ದೆಗಳನ್ನು ಮೀಸಲಿರಿಸಿದೆ. ಮೀಸಲಿಡದ ಸ್ಥಾನಗಳು 321.
ಅಂದರೆ ಒಟ್ಟು 981 ಹುದ್ದೆಗಳ ಭರ್ತಿಯಲ್ಲಿ ಇತರೆ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಅಡಿ ಹುದ್ದೆ ಕಾಣಿಸಿಲ್ಲ ಮತ್ತು ಎಸ್​ಸಿ/ಎಸ್​ಟಿ ಸಮುದಾಯಕ್ಕೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕಿಂತ ಕಡಿಮೆ ಹುದ್ದೆಗಳನ್ನು ತೋರಿಸಲಾಗಿದೆ.
ಬಿಎಸ್​ಎಫ್​ ಹೆಡ್​ಕಾನ್ಸ್​ಸ್ಟೇಬಲ್​ ರೇಡಿಯೋ ಮೆಕಾನಿಕ್​ (Radio Mechanic) ಹುದ್ದೆಗಳ ಒಟ್ಟು 330 ಹುದ್ದೆಗಳ ಭರ್ತಿಯಲ್ಲಿ 43 ಮೀಸಲಿರಿಸದ ಹುದ್ದೆಗಳು, ಒಬಿಸಿ -100, ಆರ್ಥಿಕವಾಗಿ ಹಿಂದುಳಿದ ವರ್ಗ -61, ಎಸ್​ಸಿ-77, ಎಸ್​ಟಿ – 49 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಆಗಸ್ಟ್​ 20ರಿಂದ ಶುರುವಾಗಿರುವ ಅರ್ಜಿ ಸಲ್ಲಿಕೆ (Online Application) ಸೆಪ್ಟೆಂಬರ್​ 19ರವರೆಗೆ ಇರಲಿದೆ.
ವೇತನ: 25 ಸಾವಿರ ರೂ.ಗಳಿಂದ 81 ಸಾವಿರ ರೂಪಾಯಿ.
ಪರೀಕ್ಷಾ ದಿನಾಂಕ: (Written Test) ನವೆಂಬರ್​ 22, 2022ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಬಳಿಕ ಎರಡನೇ ಹಂತದಲ್ಲಿ ದಾಖಲೆಗಳ ಪರೀಶಿಲನೆ ಮತ್ತು ಮೂರನೇ ಹಂತದಲ್ಲಿ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ವಿದ್ಯಾರ್ಹತೆ: (Education) ಎರಡೂ ಹುದ್ದೆಗಳಿಗೆ ಐಟಿಐ (ITI) ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಪಿಯುಸಿಯಲ್ಲಿ ವಿಜ್ಞಾನ ಶಿಕ್ಷಣ ಪಡೆದಿರಬೇಕು.
ವಯೋಮಿತಿ: (Age)
ಸಾಮಾನ್ಯ ವರ್ಗ: ಗರಿಷ್ಠ 25 ವರ್ಷ, ಇತರೆ ಹಿಂದುಳಿದ ವರ್ಗ: ಗರಿಷ್ಠ 28 ವರ್ಷ, ಎಸ್​ಸಿ/ಎಸ್​ಟಿ ಸಮುದಾಯ: 30 ವರ್ಷ.

LEAVE A REPLY

Please enter your comment!
Please enter your name here