ತೆಲಂಗಾಣದ ಪಕ್ಷಕ್ಕೆ ಕರ್ನಾಟಕದಲ್ಲಿ ದಾರಿ ಮಾಡಿಕೊಟ್ಟ ಜೆಡಿಎಸ್

ಟಿಆರ್ ಎಸ್ ಪಕ್ಷ ತನ್ನ ನೆಲೆಯನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಸಲುವಾಗಿ ಹೆಸರನ್ನೇ ಬದಲಿಸಿಕೊಂಡಿದೆ. ಬಿ ಆರ್ ಎಸ್ ಆಗಿ ಬದಲಾಗಿದೆ. ನಿನ್ನೆ ಹೈದರಾಬಾದ್ ನಲ್ಲಿ ಬಿ ಆರ್ ಎಸ್ ಬಾವುಟವನ್ನು ಆ ಪಕ್ಷದ ಅಧ್ಯಕ್ಷ, ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅನಾವರಣ ಮಾಡಿದ್ದಾರೆ. ಅಷ್ಟೇ ಅಲ್ಲ, ಬಿ ಆರ್ ಎಸ್ ಮೊದಲ ಬಾರಿ ಯಾವ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಕೆಸಿಆರ್ ಫಸ್ಟ್ ಟಾರ್ಗೆಟ್ ಕರ್ನಾಟಕ:

ಬಿ ಆರ್ ಎಸ್ ಪಕ್ಷ ಮೊದಲಿಗೆ ಸ್ಪರ್ಧೆ ಮಾಡೋದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ. ಕರ್ನಾಟಕದ ಕನಿಷ್ಠ 10ಜಿಲ್ಲೆಗಳಲ್ಲಿ ಬಿ ಆರ್ ಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕೆಸಿಆರ್ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಬಿಆರ್ ಎಸ್ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಸ್ಪರ್ಧೆ ಮಾಡಲಿದೆ. ಕರ್ನಾಟಕದಲ್ಲಿ ಹೆಚ್ ಡಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಕೆಸಿಆರ್ ಘೋಷಣೆ ಮಾಡಿದ್ದಾರೆ.

ಇಡೀ ಕರ್ನಾಟಕದಲ್ಲಿ ಸ್ಪರ್ಧೆ ಮಾಡಲ್ವಾ ಜೆಡಿಎಸ್?

ಬಿಆರ್ ಎಸ್ ಮತ್ತು ಜೆಡಿಎಸ್ ಮಿತ್ರ ಪಕ್ಷಗಳು. ಬಿ ಆರ್ ಎಸ್ ಸ್ಪರ್ಧೆ ಮಾಡುವ ಕಡೆ ಜೆಡಿಎಸ್ ಸ್ಪರ್ಧೆ ಮಾಡಲ್ಲ. ಜೆಡಿಎಸ್ ಸ್ಪರ್ಧೆ ಮಾಡುವ ಕಡೆ ಬಿ ಆರ್ ಎಸ್ ಕಣಕ್ಕೆ ಇಳಿಯಲ್ಲ. ಬಿ ಆರ್ ಎಸ್ ಹತ್ತು ಜಿಲ್ಲೆಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ. ಹೀಗಾಗಿ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲ್ವಾ ಎಂಬ ಪ್ರಶ್ನೆ ಎದ್ದಿದೆ.