Big Breaking : ಬಾರದ ಲೋಕಕ್ಕೆ ಇಂಗ್ಲೆಂಡ್​ ರಾಣಿ

ಸುದೀರ್ಘ 70 ವರ್ಷಗಳ ಕಾಲ ಇಂಗ್ಲೆಂಡ್ ರಾಣಿಯಾಗಿದ್ದ ಎಲೆಜಬೆತ್ 2 (Queen Elizabeth)  ಇಂದು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

ಕೆಲ ದಿನಗಳ ಹಿಂದೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆಯಿಂದಲೇ ಅರಮನೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.

ಸ್ಕಾಟ್ಲೆಂಡ್​ನಲ್ಲಿ ಇಂದು ಗುರುವಾರ ರಾಣಿ ಎಲೆಜಬೆತ್ 2 (Queen Elizabeth)  ತಮ್ಮ 96 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ

ಪ್ರಿನ್ಸ್ ಚಾರ್ಲ್ಸ್ ಪಟ್ಟಾಭಿಷೇಕವಿಲ್ಲದೇ, ಇಂಗ್ಲೆಂಡ್ ನ ಮುಂದಿನ ರಾಜರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇಂಗ್ಲೆಂಡಿನ ರಾಜರನ್ನು ವಂಶಪಾರಂಪರ್ಯವಾಗಿ ಆಯ್ಕೆ ಮಾಡಲಾಗುತ್ತದೆ. ದೇಶದ ಎಲ್ಲಾ ಶಾಸನಬದ್ಧ ಕಾರ್ಯಾಂಗದ ಅಧಿಕಾರ ಪ್ರಧಾನಮಂತ್ರಿಯ ಕೈಯಲ್ಲಿ ಇರುತ್ತದೆ. ರಾಜರು ನಾಮಮಾತ್ರ ಕಾರ್ಯಾಂಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.

ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ರಿಂದ ತೆರವಾದ ಸ್ಥಾನಕ್ಕೆ, ಎರಡು ದಿನಗಳ ಹಿಂದೆಯಷ್ಟೇ ಲಿಜ್ ಟ್ರುಜ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ : BREAKING: ಬ್ರಿಟನ್​ ಪ್ರಧಾನಿ ಆಗಿ ಲಿಜ್​ ಟ್ರುಸ್​ ಆಯ್ಕೆ – ರಿಷಿ ಸುನಕ್​ಗೆ ಸೋಲು

LEAVE A REPLY

Please enter your comment!
Please enter your name here