ಅಯೋಧ್ಯೆ ಭೂಖರೀದಿ ವ್ಯವಹಾರ ಸಮರ್ಪಕವಾಗಿದೆ: ಪೇಜಾವರಶ್ರೀ

ಉಡುಪಿ : ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಂದಿರ ನಿವೇಶನದ ಪಕ್ಕದಲ್ಲಿರುವ ಭೂಮಿ ಖರೀದಿಸಿದ ವ್ಯವಹಾರ ಸರಿಯಾಗಿಯೇ ಇದೆ ಎಂದು ಟ್ರಸ್ಟ್‌ ಟ್ರಸ್ಟಿ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಇತ್ತೀಚಿಗೆ ಅಯೋಧ್ಯೆಗೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ಕಂಡಿದ್ದೇವೆ.

ಟ್ರಸ್ಟ್‌ನ ಸದಸ್ಯರು ಮೂರು ದಿನವಿದ್ದು ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದು ಎಲ್ಲ ವ್ಯವಹಾರಗಳೂ ಸಮರ್ಪಕವಾಗಿದೆ ಎಂದು ಖಜಾಂಚಿ ಶ್ರೀಗೋವಿಂದದೇವ ಗಿರಿ ಸ್ವಾಮೀಜಿಯವರು ತಿಳಿಸಿರುವುದಾಗಿ ಹೇಳಿದರು.

ಭೂಮಿಯನ್ನು ಕೊಟ್ಟ ಮನ್ಸೂರರೂ ತಾವು ಹಿಂದೆ ಭೂಮಿಯನ್ನು ಪಡೆದುಕೊಂಡ ಸಂದರ್ಭ ದರ ಕಡಿಮೆ ಇತ್ತು. ಈಗ ದರ ಹೆಚ್ಚಿಗೆಯಾಗಿದೆ. ಆದರೂ ಸರಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆಯಲ್ಲಿಯೇ ಕೊಟ್ಟಿದ್ದೇನೆಂದೂ ಹೇಳಿರುವುದಾಗಿ ಪೇಜಾವರ ಸ್ವಾಮೀಜಿ ತಿಳಿಸಿದರು.

LEAVE A REPLY

Please enter your comment!
Please enter your name here