ಹಿಜಬ್ ನಿಷೇಧ ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ಮೂಲದ ವಿದ್ಯಾರ್ಥಿ ನಿಬಾ ನಾನಾಜ್ ಅವರು ವಕೀಲರಾದ ಅನ್ವಸ್ ತನ್ವೀರ್ ಮೂಲಕ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಬೆಳಗ್ಗೆ ೧೦.೩೦ಕ್ಕೆ ಹಿಜಬ್ ಇಸ್ಲಾಂನ ಮೂಲಭೂತ ಆಚರಣೆ ಅಲ್ಲ ಎಂದು ಹೇಳಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಬ್ ನಿಷೇಧ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ನ ತ್ರಿಸದಸ್ಯ ಪೂರ್ಣ ಪೀಠ ಎತ್ತಿ ಹಿಡಿದಿತ್ತು.
`ಹಿಜಬ್ ಖಾಸಗಿತನ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ ಮತ್ತು ೧೯೮೩ರ ಶಿಕ್ಷಣ ಕಾಯ್ದೆ ಯೂನಿಫಾರಂ ಕಡ್ಡಾಯ ಎಂದು ಹೇಳಿಲ್ಲ’ ಎಂದು ಮೇಲ್ಮನವಿ ಅರ್ಜಿಯಲ್ಲಿ ವಾದಿಸಲಾಗಿದೆ.
`ಶಿಕ್ಷಣ ಕಾಯ್ದೆಯ ಉದ್ದೇಶ ಶೈಕ್ಷಣಿಕ ಸಂಸ್ಥೆಗಳನ್ನು ನಿಯಂತ್ರಿಸುವುದೇ ಹೊರತು ವಿದ್ಯಾರ್ಥಿಗಳನ್ನಲ್ಲ. ಶಿಕ್ಷಣ ನಿಯಂತ್ರಣ, ಪಠ್ಯಕ್ರಮ, ಶೈಕ್ಷಣಿಕ ಮಾಧ್ಯಮ ನಿರ್ಧರಿಸಲು ಸರ್ಕಾರಕ್ಕೆ ಕಾಯ್ದೆಯಲ್ಲಿ ಅಧಿಕಾರ ನೀಡಲಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿ ರಚನೆಗೆ ಕಾಯ್ದೆಯಲ್ಲಿ ಅವಕಾಶ ಇಲ್ಲ. ಒಂದು ವೇಳೆ ಸಮಿತಿ ರಚನೆ ಮಾಡಿದರೂ ಸಮವಸ್ತç ನಿಯಮ ಮಾಡುವ ಅಧಿಕಾರವಿಲ್ಲ’
ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಈ ಹಿಂದೆಯೂ ಸುಪ್ರೀಂಕೋರ್ಟ್ ನಲ್ಲಿ ಹಿಜಬ್ ವಿವಾದ ಸಂಬAಧ ಅರ್ಜಿ ಸಲ್ಲಿಕೆ ಆಗಿತ್ತು. ಆದರೆ ಆಗ ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಆ ಹಂತದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ ಅವರ ನೇತೃತ್ವದ ಪೀಠ ನಿರಾಕರಿಸಿತ್ತು.