Breaking News : ದಲಿತ ಶಾಸಕ ಜಿಗ್ನೇಶ್ ಮೇವಾನಿ ಸೇರಿ 18 ಜನರಿಗೆ ಜೈಲು ಶಿಕ್ಷೆ

Jignesh Mevani

ಗುಜರಾತ್​ನ ದಲಿತ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ (Jignesh Mevani) ಸೇರಿದಂತೆ 16 ಜನರಿಗೆ ಅಹ್ಮದಾಬಾದ್ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

2016 ರಲ್ಲಿ ನಡೆದಿದ್ದ ಗಲಭೆ ಮತ್ತು ಕಾನೂನು ಬಾಹಿರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟ್ರೋಪಾಲಿಟಿನ್ ನ್ಯಾಯಾಲಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಜಿಗ್ನೇಶ್ ಮೇವಾನಿ (Jignesh Mevani) ಸೇರಿದಂತೆ 19 ಜನರಿಗೆ 6 ತಿಂಗಳ ಸಾಧಾರಣ ಜೈಲು ಶಿಕ್ಷ ವಿಧಿಸಿ ಇಂದು ಆದೇಶ ಹೊರಡಿಸಿದೆ.

2016ರಲ್ಲಿ ಗುಜರಾತ್ ವಿಶ್ವವಿದ್ಯಾಲಯದ ಕಾನೂನು ಭವನಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ನಾಮಕರಣ ಮಾಡುವಂತೆ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಆಗ ಎಲ್ಲಾ 20 ಜನರನ್ನೂ ಪೊಲೀಸರು ಬಂಧಿಸಿದ್ದರು. ಇದೀಗ, ಈ ಪ್ರಕರಣದಲ್ಲಿ ಒಬ್ಬ ಸಾವನ್ನಪ್ಪಿದ್ದು, ಜಿಗ್ನೇಶ್ ಮೇವಾನಿ ಸೇರಿದಂತೆ 19 ಜನರಿಗೆ ಅಹ್ಮದಾಬಾದ್ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸಾರ್ವಜನಿಕ ಸಭೆಯಲ್ಲಿ ಜಿಗ್ನೇಶ್ ಮೇವಾನಿ ಮೇಲೆ ದಾಳಿ :

ಈ ವಾರದ ಆರಂಭದಲ್ಲಿ ಅಹ್ಮದಾಬಾದ್​ನಲ್ಲಿ ನಡೆದ ಸಾರ್ವಜನಿಕೆ ಸಭೆಯಲ್ಲಿ ತಮ್ಮ ಮೇಲೆ ಮಾಜಿ ಗೃಹ ಸಚಿವ ಪ್ರದೀಪ್​ಸಿನ್ಹಾ ಜಡೇಜ ಅವರ ಗೂಂಡಾಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಅಹ್ಮದಾಬಾದ್​ನ ವಸ್ತ್ರಲ್​ನಲ್ಲಿನ ನರ್ಮದಾ ಅಪಾರ್ಟ್​​ಮೆಂಟ್​ ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿ ಮತ್ತು ಪರಿಶಿಷ್ಠ ವರ್ಗ ಇಲಾಖೆಯ ಅಧ್ಯಕ್ಷ ಫಿತಾದಿಯ ಅವರು ಭಾಗವಹಿಸಿದ್ದರು.

ಜೈಲು ಶಿಕ್ಷೆಗೆ ಒಳಪಟ್ಟ ಎಲ್ಲಾ 19 ಜನರಿಗೂ ನ್ಯಾಯಾಲಯ ಜಾಮೀನು ನೀಡಿದೆ. ಮುಂದಿನ ವಿಚಾರಣೆ ಅಕ್ಟ್ಟೋಬರ್ 17 ರಂದು ನಡೆಯಲಿದೆ.

ಇದನ್ನೂ ಓದಿ : ಅನುಮತಿ ಪಡೆಯದೆ ರ್ಯಾಲಿ ಆಯೋಜನೆ : ಶಾಸಕ ಜಿಗ್ನೇಶ್ ಮೇವಾನಿ ಜೊತೆ 9 ಜನರಿಗೆ 3 ತಿಂಗಳು ಜೈಲು ಶಿಕ್ಷೆ

LEAVE A REPLY

Please enter your comment!
Please enter your name here