Goa Politics : ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿಗೆ?

Goa Politics

ಗೋವಾದ ರಾಜಕಾರಣದಲ್ಲಿ (Goa Politics) ಪಕ್ಷಾಂತರ ಪರ್ವ ಮತ್ತೆ ಮುನ್ನೆಲೆಗೆ ಬಂದಿದೆ. ಗೋವಾದಲ್ಲಿ 8 ಜನ ಕಾಂಗ್ರೆಸ್​​ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ್ ತನವಾಡೆ ತಿಳಿಸಿದ್ದಾರೆ.

ಗೋವಾ ಕಾಂಗ್ರೆಸ್​ನ 11 ಜನ ಶಾಸಕರಲ್ಲಿ 8 ಜನ ಶಾಸಕರು ಬಿಜೆಪಿಗೆ ಇಂದು ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್​ ಪ್ರಮುಖ ನಾಯಕರುಗಳಾದ ದಿಗಂಬರ್ ಕಾಮತ್, ಮಿಚೆಲ್ ಲೋಬೊ ಸೇರಿದಂತೆ ಡೆಲಿಲ್ಹಾ ಲೋಬೊ, ರಾಜೇಶ್ ಪಾಲ್​ದೇಸಾಯ್, ಕೇದಾರ್ ನಾಯ್ಕ್, ಸಂಕಲ್ಪ್ ಅಮೋಂಕರ್, ಅಲೆಕ್ಸೊ ಸಿಕ್ವೇರಾ ಮತ್ತು ರುಡಾಲ್ಫ್ ಫರ್ನಾಂಡೀಸ್ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಇದನ್ನೂ ಓದಿ : ಗೋವಾ : ಇಬ್ಬರು ಶಾಸಕರ ಅನರ್ಹಗೊಳಿಸಲು ಸ್ಪೀಕರ್​ಗೆ ಕಾಂಗ್ರೆಸ್ ಅರ್ಜಿ

ಇಂದು ಬಿಜೆಪಿಯ ಮುಖ್ಯಮಂತ್ರಿ ಪ್ರಮೋದ್ ಸಾವಂತ್​ರನ್ನು ಈ ಕಾಂಗ್ರೆಸ್​​ ಶಾಸಕರ ತಂಡ ಬೇಟಿಯಾಗಿದೆ. ಆ ಬಳಿಕ ವಿಧಾನಸಭಾ ಸ್ಪೀಕರ್​ರನ್ನು ಈ ತಂಡ ಭೇಟಿಯಾಗಿದೆ. ಸದನ ನಡೆಯದೇ ಇರುವ ಸಮಯದಲ್ಲಿ ಸ್ಪೀಕರ್​​ರನ್ನು ಭೇಟಿಯಾದ ಬಗ್ಗೆ ಕುತೂಹಲ ಮೂಡಿದೆ.

3 ರಲ್ಲಿ 2 ರಷ್ಟು ಜನ ಶಾಸಕರು ಬಿಜೆಪಿಗೆ ಸೇರ್ಪಡೆ ಆಗುತ್ತಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ.

2 ತಿಂಗಳುಗಳ ಹಿಂದೆಯಷ್ಟೇ ಗೋವಾ ಕಾಂಗ್ರೆಸ್​​ನ (Goa Politics) ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಆ ಬೆನ್ನಲ್ಲೇ, ಎಚ್ಚೆತ್ತಿದ್ದ ಕಾಂಗ್ರೆಸ್​​ ಎಲ್ಲಾ ಶಾಸಕರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿತ್ತು. ಈ ಸಮಯದಲ್ಲಿ ಕಾಂಗ್ರೆಸ್​ ನಾಯಕರಾದ ದಿಗಂಬರ್ ಕಾಮತ್ ಮತ್ತು ಮಿಚೆಲ್ ಲೋಬೊರನ್ನು ಶಾಸಕತ್ವ ಸ್ಥಾನದಿಂದ ವಜಾ ಮಾಡುವಂತೆ ಸ್ಪೀಕರ್​​ಗೆ ಮನವಿ ಮಾಡಿಕೊಂಡಿತ್ತು.

2019 ರಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಆಗಿನ 15 ಜನ ಕಾಂಗ್ರೆಸ್ ಶಾಸಕರಲ್ಲಿ 10 ಜನ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹಾಗೆಯೇ, ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಯಿಂದ ಪಾರಾಗಿದ್ದರು. ಇದನ್ನೂ ಓದಿ : ಗೋವಾ : ಸಚಿವೆ ಸ್ಮೃತಿ ಇರಾನಿ ಮಗಳು ಅಕ್ರಮ ಬಾರ್​ ನಡೆಸುತ್ತಿದ್ದಾರೆ – ಕಾಂಗ್ರೆಸ್ ಆರೋಪ

LEAVE A REPLY

Please enter your comment!
Please enter your name here