ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದು, ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗ್ತಿರುವ ಲಸಿಕೆಯಲ್ಲಿ ತೇಜಸ್ವಿಸೂರ್ಯ ಚಿಕ್ಕಪ್ಪ, ಶಾಸಕ ರವಿಸುಬ್ರಹ್ಮಣ್ಯ ಅವರಿಗೆಕಮಿಷನ್ ನೀಡಲಾಗಿದೆ ಎನ್ನುವ ಸ್ಫೋಟಕ ಆಡಿಯೋ ಬಯಲಾಗಿದೆ.
ಬಿಜೆಪಿ ಸಂಸದ ತೇಜಸ್ವಿಸೂರ್ಯ ಬೆಂಗಳೂರಿನ ವಾಸವಿ ಮತ್ತು ರಕ್ಷಾ ಆಸ್ಪತ್ರೆಯಲ್ಲಿ ಲಸಿಕೆ ಮಾರಾಟದ ಪ್ರಚಾರ ಮಾಡುತ್ತಿದ್ದಾರೆ. ಎರಡೂ ಆಸ್ಪತ್ರೆಗಳು ತೇಜಸ್ವಿಸೂರ್ಯ ಅವರ ಬೆಂಬಲದೊAದಿಗೆ ಲಸಿಕೆ ವಿತರಣೆ ಮಾಡುತ್ತಿರುವುದಾಗಿ ತೇಜಸ್ವಿಸೂರ್ಯ ಫೋಟೋವನ್ನೂ ಹಾಕಿಯೇ ಬ್ಯಾನರ್ಗಳನ್ನು ಹಾಕಿದ್ದವು.
ವೆಂಕಟೇಶ್ ಎಂಬವರು ಆಸ್ಪತ್ರೆಯ ಸಿಬ್ಬಂದಿಯೊAದಿಗೆ ಮಾತಾಡಿದ್ದು ಆ ಆಡಿಯೋದಲ್ಲಿ ಆಸ್ಪತ್ರೆ ಸಿಬ್ಬಂದಿ ಪ್ರತಿ ಡೋಸ್ಗೆ ಬಸವಗುಡಿ ಶಾಸಕ ರವಿಸುಬ್ರಹ್ಮಣ್ಯಗೆ 700 ರೂಪಾಯಿ ಕೊಡಬೇಕಾಗುತ್ತದೆ. ಬಿಬಿಎಂಪಿಯವರು ನಮಗೆ ಲಸಿಕೆ ಪೂರೈಕೆ ಮಾಡಿದ್ದರು ಎಂದು ವೆಂಕಟೇಶ್ ಅವರಿಗೆ ಉತ್ತರ ನೀಡಿದ್ದಾರೆ.
ಈ ಆಡಿಯೋವನ್ನು ಕನ್ನಡದ ಸುದ್ದಿವಾಹಿನಿಗಳೂ ಪ್ರಸಾರ ಮಾಡಿವೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬರುವ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಲಸಿಕೆ ಕೊರತೆ ಕಾರಣದಿಂದ ಸೋಮವಾರ ಸಾರ್ವಜನಿಕರಿಗೆ ಉಚಿತ ಲಸಿಕೆ ವಿತರಣೆಯನ್ನು ನಿಲ್ಲಿಸಲಾಗಿತ್ತು. ಲಸಿಕೆ ಕೊರತೆ ಬಗ್ಗೆ ಸ್ವತಃ ಸಂಸದ ತೇಜಸ್ವಿಸೂರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಕೂಡಾ ಟ್ವೀಟಿಸಿದ್ದರು.
ಜಯನಗರದಲ್ಲಿ ಲಸಿಕೆ ಕೊರತೆ ಇದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ 900 ರೂಪಾಯಿಗೆ ಲಸಿಕೆ ವಿತರಣೆ ಮಾಡಲಾಗ್ತಿದೆ ಮತ್ತು ಅಸ್ಪತ್ರೆಗಳು ನೇರವಾಗಿ ಸಂಸದರೇ ಬೆಂಬಲ ನೀಡಿದ್ದಾರೆ ಎಂದು ಘೋಷಿಸಿಕೊಂಡಿವೆ.
ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡುವಂತೆ ಸ್ವತಃ ಸಂಸದ ತೇಜಸ್ವಿಸೂರ್ಯ ಅವರೇ ಕೋವಿಡ್ ಟಾಸ್ಕ್ಫೋರ್ಸ್ ಅಧ್ಯಕ್ಷ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಮೇಲೆ ಒತ್ತಡ ಹೇರಿದ್ದರು. ತೇಜಸ್ವಿಸೂರ್ಯ ಒತ್ತಡಕ್ಕೆ ಮಣಿದು ಸಚಿವರು ಪ್ರತಿ ಡೋಸ್ನ ಸೇವಾ ಶುಲ್ಕವನ್ನು ಈಗಿರುವ 100 ರೂಪಾಯಿಯಿಂದ 200 ರೂಪಾಯಿಗೆ ಹೆಚ್ಚಳ ಮಾಡಿದ್ದರು.
ತೇಜಸ್ವಿಸೂರ್ಯ ಅವರ ಸಂಬAಧಿ ಶಾಸಕ ರವಿಸುಬ್ರಹ್ಮಣ್ಯ ವಿರುದ್ಧ ಕೇಳಿಬಂದಿರುವ ಆರೋಪವನ್ನು ಉಲ್ಲೇಖಿಸಿರುವ ಕಾಂಗ್ರೆಸ್ನ ಯುವ ನಾಯಕ ಶ್ರೀವತ್ಸ ಕ್ರಮಕ್ಕೆ ಆಗ್ರಹಿಸಿದ್ದಾರೆ.