Breaking News.. ಮತ್ತೊಬ್ಬ ನಟಿಗೆ NCB ಶಾಕ್

ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ, ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಶಾಕ್ ನೀಡಿದೆ. ಅತ್ತ ಮುಂಬೈನಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ಅಪ್ತ ಗೆಳತಿ ರಿಯಾ ಚಕ್ರವರ್ತಿ ಮನೆ ಮೇಲೆ NCB ರೇಡ್ ಮಾಡಿದೆ.

ಈಗಾಗಲೇ ಡ್ರಗ್ ಡೀಲರ್ ಜೈದ್ ವಿಲಾತ್ರಾನನ್ನು ವಶಕ್ಕೆ ತೆಗೆದುಕೊಂಡಿರುವ NCB ಇದೀಗ ನಟಿ ರಿಯಾ ಚಕ್ರವರ್ತಿ ನಿವಾಸದಲ್ಲಿ ಶೋಧ ನಡೆಸಿದ್ದಾರೆ.

ರಿಯಾ ಸಹೋದರ ಷೋವಿಕ್ ಸೂಚನೆ ಮೇರೆಗೆ ಸುಶಾಂತ್‌ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡಾ ಡ್ರಗ್ಸ್ ಸಂಗ್ರಹಿಸಿದ್ದರು ಎಂದು ಎನ್ಸಿಬಿ ತಿಳಿಸಿದೆ. ಈ ಪ್ರಕರಣ ಸಂಬಂಧ ಷೋವಿಕ್ ಮತ್ತು ಮಿರಾಂಡಾ ನಿವಾಸದ ಮೇಲೆ ಸಹ ರೇಡ್ ನಡೆದಿದೆ. ವಿಚಾರಣೆಗೆ ಹಾಜರಾಗುವಂತೆ NCB ಸಮನ್ಸ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here