BREAKING: ಚರ್ಚ್​​ ಎದುರು ಬಹಿರಂಗ ಕ್ಷಮೆ ಕೇಳಿದ BJP

BJP
BJP
ಮುಂದಿನ ವರ್ಷ ಚುನಾವಣೆಯ ನಡೆಯಲಿರುವ ನಾಗಾಲ್ಯಾಂಡ್​ (Nagaland) ರಾಜ್ಯದಲ್ಲಿ ಬಿಜೆಪಿ ಅಲ್ಲಿನ ಪ್ರಮುಖ ಚರ್ಚ್​ (Church)​ ಎದುರು ಬಹಿರಂಗ ಕ್ಷಮೆಯಾಚಿಸಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನ್ಯಾಗಲ್ಯಾಂಡ್​​ಗೆ ಮೊಟ್ಟ ಮೊದಲ ಬಾರಿಗೆ ಭೇಟಿ ನೀಡಿದ ಜೆ ಪಿ ನಡ್ಡಾ (J P Nadda) ಅವರು ಗುಡ್ಡುಗಾಡು ರಾಜ್ಯದ ( Hill State) ಪ್ರಮುಖ ಚರ್ಚ್​​ಗಳಲ್ಲಿ ಒಂದಾಗಿರುವ ಕೊಹಿಲಾ ಆವೋ ಬ್ಯಾಪಿಸ್ಟ್​​ ಆರೋಗೋ (Kohima Ao Baptist Church) (KABA) ಚರ್ಚ್​​ಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸೋರಿಕೆ ಆಗಿತ್ತು.
ಕ್ರಿಶ್ಚಿಯನ್​​ ಧರ್ಮದವರೇ ಅತ್ಯಧಿಕ ಇರುವ ಗುಡ್ಡಗಾಡು ರಾಜ್ಯದಲ್ಲಿ ಚರ್ಚ್​​ಗೆ ಬಿಜೆಪಿ ಅಧ್ಯಕ್ಷರು ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸೋರಿಕೆಯಿಂದ ಬಿಜೆಪಿಯೇ ಮುಜುಗರಕ್ಕೀಡಾಗಿತ್ತು.
ಈ ಹಿನ್ನೆಲೆಯಲ್ಲಿ ನಾಗಲ್ಯಾಂಡ್​ ಬಿಜೆಪಿ ಬಹಿರಂಗ ಕ್ಷಮೆಯಾಚಿಸಿ (Apology) ಪ್ರಕಟಣೆ ಹೊರಡಿಸಿದೆ.
ಕಾಬಾ(KABA) ಹೊಂದಿರುವ ಒಳ್ಳೆಯ ಹೆಸರನ್ನು ಎಳೆದು ತರುವ ಕೆಟ್ಟ ಉದ್ದೇಶ ನಮ್ಮದ್ದಲ್ಲ. ಚರ್ಚ್​​ ಈಗಾಗಲೇ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ನಿರತವಾಗಿರುವ ಕಾರಣ ನಮ್ಮ ಆಹ್ವಾನವನ್ನು ಚರ್ಚ್​​ ತಿರಸ್ಕರಿಸಿದ್ದು ಸೂಕ್ತವಾಗಿದೆ.
ನಡ್ಡಾ ಅವರ ಪ್ರವಾಸದ ಮಾಹಿತಿ ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿತ್ತು ಎಂಬುದು ನಮಗೆ ತಿಳಿದಿಲ್ಲ.
ನಾವು ಕೊಹಿಲಾ ಆವೋ ಬ್ಯಾಪಿಸ್ಟ್​​ ಆರೋಗೋ ಎದುರು ಪ್ರಾಮಾಣಿಕ ಕ್ಷಮೆಯನ್ನು ಬೇಡುತ್ತಿದ್ದೇವೆ. ಭಾರತೀಯ ಜನತಾ ಪಕ್ಷ ಮತ್ತು ಚರ್ಚ್​​ನ ತೇಜೋವಧೆ ಮಾಡಲು ಅನೈತಿಕ ಶಕ್ತಿಗಳ ಪ್ರಯತ್ನದಿಂದ ಆಗಿರುವ ಮುಜುಗರಕ್ಕೆ ಪ್ರಾಮಾಣಿಕ ಕ್ಷಮೆ ಕೇಳುತ್ತೇವೆ
ಬಿಜೆಪಿ ಕ್ಷಮೆ ಕೇಳಿದೆ.

LEAVE A REPLY

Please enter your comment!
Please enter your name here