ರಾಜಧಾನಿ ಬೆಂಗಳೂರಲ್ಲಿ (Bengaluru) ರಾತ್ರಿ ಮೇಘಸ್ಫೋಟ ಆಗಿರುವ ಬಗ್ಗೆ ವರದಿ ಆಗಿದ್ದು, ಮೇಘಸ್ಫೋಟದ ಕಾರಣದಿಂದ ಸಿಲಿಕಾನ್ ಸಿಟಿಯಲ್ಲಿ ಇದುವರೆಗಿನ ಅತ್ಯಧಿಕ ಮಳೆ ಆಗಿದೆ.
ಬೆಂಗಳೂರಲ್ಲಿ ನಸುಕಿನ ಜಾವ 4.15ರವರೆಗೆ ಹಲವು ಭಾಗಗಳಲ್ಲಿ ಭಾರೀ ವರ್ಷಧಾರೆ ಆಗಿದೆ. ರಾತ್ರಿ 8 ಗಂಟೆಗೆ ಶುರುವಾದ ಧಾರಾಕಾರ ಮಳೆ ನಸುಕಿನ ಜಾವದವರೆಗೂ ಮುಂದುವರೆದಿದೆ (Begaluru Rain).
ವೈಟ್ ಫೀಲ್ಡ್ – 221ಮಿ.ಮೀ, ತಾವರೆಕೆರೆ – 175 ಮಿ.ಮೀ, ಚೋಳನಾಯಕನಹಳ್ಳಿ – 162 ಮಿ.ಮೀ, ಸಂಪಗಿರಾಮನಗರ – 146 ಮಿಮೀ, ಹೆಚ್ಎಎಲ್ – 141 ಮಿಮೀಯಷ್ಟು ಮಳೆ ಆಗಿದೆ.
ವರ್ತೂರು – 138 ಮಿಮೀ, ದೊಡ್ಡನೆಕುಂದಿ – 133 ಮಿಮೀ, ಮಾರತಹಳ್ಳಿ – 130 ಮಿಮೀಯಷ್ಟು ಮಳೆ ಆಗಿದೆ.
ವೈಟ್ಫೀಲ್ಡ್, ಗೊಟ್ಟಿಗೆರೆ, ಬನ್ನೇರುಘಟ್ಟ ರಸ್ತೆ, ವಿಜಯನಗರ, ರಾಜಾಜಿನಗರ, ಬಸವೇಶ್ವರನಗರ, ಯಶವಂತಪುರ, ಪೀಣ್ಯ, ಲಗ್ಗೆರೆ, ನಂದಿನಿ ಲೇಔಟ್, ಸರ್ಜಾಪುರ ಎಕೋಸ್ಪೇಸ್, ಮಲ್ಲೇಶ್ವರಂ, ಶೇಷಾದ್ರಿಪುರಂ, ಹೆಬ್ಬಾಳ, ಸಂಜಯನಗರ, ಆರ್ ಟಿ ನಗರ, ನಾಗವಾರ, ಹೆಣ್ಣೂರು, ಬಾಣಸವಾಡಿ, ಆರ್ ಆರ್ ನಗರ, ಕೆಂಗೇರಿ, ದೀಪಾಂಜಲಿ ನಗರ, ಚಾಮರಾಜಪೇಟೆಯಲ್ಲಿ ಅತ್ಯಧಿಕ ಮಳೆ ಆಗಿದೆ.
ಮಳೆಯಬ್ಬರದಿಂದ ಇನ್ನೂ ನೀರು ಇಳಿದಿಲ್ಲ. ರಸ್ತೆಗಳಲ್ಲಿ ಬೆಳಗ್ಗೆ 8 ಗಂಟೆಯ ಬಳಿಕವೂ ವಾಹನಗಳು ಮುಳುಗಡೆ ಆಗಿರುವ ದೃಶ್ಯ ಸಾಮಾನ್ಯವಾಗಿದೆ.
ಎಂದಿನಂತೆ ಬೆಂಗಳೂರಿನ ಪೋಶ್ ಏರಿಯಾಗಳಾದ ಡಾಲರ್ಸ್ ಕಾಲನಿ, ಇಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಸರ್ಜಾಪುರ, ಮಾರತ್ ಹಳ್ಳಿ ಸೇರಿ ಹಲವು ಪ್ರದೇಶಗಳು ಜಲಮಯವಾಗಿವೆ. ರಸ್ತೆಗಳು, ಮನೆಗಳಿಗೆಲ್ಲ ನೀರು ನುಗ್ಗಿ ಜನ ಪರದಾಡಿದ್ದಾರೆ. ರೈನ್ ಬೋ ಕಾಲನಿಯಲ್ಲಿ ಪರಿಸ್ಥಿತಿ ದಾರುಣವಾಗಿದೆ.
#bangalorerains
Whitefield Main Road, near Varthur pic.twitter.com/QDr1bg2rw4— Anant Patil (@ADnant) September 5, 2022
ಬೆಂಗಳೂರು – ತುಮಕೂರು ರಸ್ತೆಯ ಅಡಕಮಾರನಹಳ್ಳಿಯಲ್ಲಿ ಹೈವೇಗೆ ನೀರು ನುಗ್ಗಿದೆ. ಮೊಳಕಾಲುದ್ದ ನೀರು ನಿಂತಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ದ್ವಿಚಕ್ರ ವಾಹನ ಸವಾರ ಪರದಾಟ ನೋಡಲು ಆಗದ ಸ್ಥಿತಿ ಇದೆ. ಸಮೀಪದ ಜೈನ ಮಂದಿರ ಸಂಪೂರ್ಣ ಜಲಾವೃತವಾಗಿದೆ.