ತೆಲುಗಿನ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಇದೇ ಶುಕ್ರವಾರ ಅಂದರೆ ಮಾರ್ಚ್ 25ರಂದು ಬಿಡುಗಡೆ ಆಗುತ್ತಿದೆ. ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆಯಾದರೂ ಕನ್ನಡದಲ್ಲಿ ಆರ್ ಆರ್ ಆರ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಇದು ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಆರ್ ಆರ್ ಆರ್ ಸಿನಿಮಾ ತಂಡ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್ ಭಾಗವಹಿಸಿ ಚಿತ್ರದ ಪರ ಪ್ರಚಾರವನ್ನೂ ಮಾಡಿದ್ದರು.
ವಿಚಿತ್ರ ಎಂದರೆ ಶಿವಣ್ಣ ಅವರ ಸಹೋದರ, ಕರುನಾಡಿನ ರಾಜಕುಮಾರ ಜೇಮ್ಸ್ ಚಿತ್ರವನ್ನು ಕನ್ನಡ ಚಿತ್ರಮಂದಿರಗಳಿAದ ಬಲವಂತವಾಗಿ ತೆಗೆಯುವ ಒತ್ತಡ ಹಾಕಲಾಗುತ್ತಿದೆ ಎಂದು ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಅವರೇ ನಿನ್ನೆ ಬಹಿರಂಗವಾಗಿ ಅಸಹಾಯಕತೆ ತೋಡಿಕೊಂಡಿದ್ದಾರೆ. ಪರಭಾಷಾ ಸಿನಿಮಾಗಳ ಅಬ್ಬರ ಅಪ್ಪು ಅವರ ಸಿನಿಮಾಕ್ಕೂ ತೊಂದರೆ ಕೊಡುತ್ತಿದ್ದರೂ ಕನ್ನಡ ಸಿನಿಮಾದ ನಾಯಕ ನಟರು ಇದುವರೆಗೂ ಯಾರೂ ತಮ್ಮ ಆಕ್ಷೇಪ ಬಹಿರಂಗವಾಗಿ ಹೇಳಿಲ್ಲ.
`ರಾಜಮೌಳಿ ಪಿಚ್ಚರ್ ಫಸ್ಟ್ ಡೇ ಫಸ್ಟ್ ಶೋ ನೋಡ್ತೇನೆ. ನಟ ತಾರಕ್,ರಾಮ್ ಚರಣ್, ಸಿನಿಮಾ ಹಣ ಕೊಟ್ಟು ಹೆಮ್ಮೆಯಿಂದ ನೋಡ್ತೇನೆ’ ಎಂದು ಶಿವಣ್ಣ ಹೇಳಿದ್ದರು. ಆದರೆ ಈಗ ಆರ್ ಆರ್ ಆರ್ ಸಿನಿಮಾ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಪ್ರದರ್ಶನವೇ ಆಗುತ್ತಿಲ್ಲ. ಹೀಗಾಗಿ ಆರ್ ಆರ್ ಆರ್ ಸಿನಿಮಾವನ್ನುನ ಬಹಿಷ್ಕರಿಸುವಂತೆ ಒಕ್ಕೊರಲಿನ ಆಗ್ರಹ ಕೇಳಿಬಂದಿದೆ.
ಶಿವಣ್ಣ ಅವರು ವೇದಿಕೆ ಮೇಲೆ
"ರಾಜಮೌಳಿ ಪಿಚ್ಚರ್ ಫಸ್ಟ್ ಡೇ ಫಸ್ಟ್ ಶೋ ನೋಡ್ತೇನೆ.
ನಟ ತಾರಕ್,ರಾಮ್ ಚರಣ್, ಸಿನಿಮಾ ಹಣ ಕೊಟ್ಟು ಹೆಮ್ಮೆಯಿಂದ ನೋಡ್ತೇನೆ" ಅಂದರು.
ಶಿವಣ್ಣನ ಸಿನಿಮಾನ ಒಂದನ್ನಾದರೂ ನಾವು ನೋಡಿದ್ದೇವೆ ಅನ್ನಲಿಲ್ಲ ಅವರುಗಳು.ಈ ನಡೆಯೇ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿದೆ ಶಿವಣ್ಣ
ಇದೆಲ್ಲ ಬೇಕಾ ಶಿವಣ್ಣ?@NimmaShivanna pic.twitter.com/onRfCrNTHj— ಉಮೇಶ್ ಶಿವರಾಜು |Umesh Shivaraju (@umesh_anush) March 22, 2022
RRR hindi version in Vijayapur. Who is behind this mafia? pic.twitter.com/HylfmNe2rt
— Jayateerth Nadagouda ಜಯತೀರ್ತ ನಾಡಗೌಡ (@jayateerthbn) March 22, 2022
ಕನ್ನಡಿಗರನ್ನ ಹೇಗೆ ನೋಡ್ತಾರೆ, ಹೇಗೆ ನಡೆಸ್ಕೊತಾರೆ ಅದೂ ಬೆಂಗಳೂರಿನಲ್ಲೇ ಅಂತ ಇದು ಹೇಳುತ್ತಿದೆ. ಕನ್ನಡ ಪರ ಸಂಘಟನೆಗಳ ಬಗ್ಗೆ, ಕನ್ನಡ ಚಿತ್ರೋದ್ಯಮದ ಬಗ್ಗೆ, ಕನ್ನಡದ ರಾಜಕಾರಣಿಗಳ ಬಗ್ಗೆ ಎಷ್ಟು ಭಯ ಭಕ್ತಿ ಇದೆ ಅಂತ ಕೂಡ ಇದರಿಂದ ಗೊತ್ತಾಗತ್ತೆ. pic.twitter.com/JTI9kiPyiW
— Ganesh Chetan (@ganeshchetan) March 22, 2022
ಶಿವಣ್ಣ,ನಮ್ಮ #James ಚಿತ್ರ ತೆಗೆದು #RRR ಚಿತ್ರವನ್ನು ನಮ್ಮ ನಾಡಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡ್ತಿದ್ದಾರೆ.
ಕೋಟಿ ಕೋಟಿ ಕನ್ನಡಿಗರು #RRR ನಂತ ತೆಲುಗು ಚಿತ್ರಗಳ ತೆಲುಗಲ್ಲೇ ನೋಡಿ ಅಭ್ಯಾಸವಾದರೆ ನಾಳೆ ಕನ್ನಡ ಬಾಶೆ ಚಿತ್ರ ನೋಡುವವರು ಯಾರೂ ಉಳಿದಿರೋಲ್ಲ. @NimmaShivanna.
ನೀವು ನಾವು ಹೇಡಿಗಳೇ?
ಬರಲಿ, ನಿಮ್ಮ ಕನ್ನಡ ಪರ ಕೂಗು pic.twitter.com/aA2Xx4rwuf— ಉಮೇಶ್ ಶಿವರಾಜು |Umesh Shivaraju (@umesh_anush) March 22, 2022
ನಮ್ ಶಿವಣ್ಣ, ಚಿಕ್ಕಬಳ್ಳಾಪುರದ ಸುದಾಕರಣ್ಣ ಮತ್ತು ಬಸವರಾಜ ಬೊಮ್ಮಾಯಣ್ಣ ಎಲ್ಲರೂ ಹೋಗಿ ಪ್ರಮೋಟ್ ಮಾಡಿದ್ದು ತೆಲುಗಿನ #RRRMoive ವನ್ನ,
ಹಾಗೆಯೆ ಗಡಿಯಲ್ಲಿ ಸಿನಿಮಾ ಹಮ್ಮುಗೆ ಮಾಡಿದ್ದು ಎರಡೂ ನಾಡಿನ ಮಂದಿಯನ್ನ ಸೆಳೆಯೋಕೆ ಹೊರೆತು ಕನ್ನಡ ಮಾತು ಹಚ್ಚಿದ #RRR ಹೆಚ್ಚು ಬಿಡುಗಡೆ ಮಾಡೋಕೆ ಅಲ್ಲ.#ಡಬ್ಬಿಂಗ್_ಇದು_ಕನ್ನಡಪರ #RRRKannada pic.twitter.com/clo8BMbNT8
— ರವಿ-Ravi ಆಲದಮರ (@AaladaMara) March 22, 2022
https://twitter.com/APPUFansKA/status/1506296230678339597?s=20&t=NR7-dk3G0iWCj5DWGLp62Q
ತಮಿಳು ನಾಡಿನಲ್ಲಿ – ತಮಿಳು
ಕೇರಳದಲ್ಲಿ – ಮಲಯಾಳಂ
ಆಂಧ್ರದಲ್ಲಿ – ತೆಲುಗು
ನಾರ್ತ್ ಇಂಡಿಯನ್ – ಹಿಂದಿ
ಆದರೇ ಕರ್ನಾಟಕದಲ್ಲಿ-ಕನ್ನಡವಿಲ್ಲ ಯಾಕೆ
ಇದು ಕನ್ನಡ ದ್ರೋಹ ತಾನೇ
ಕನ್ನಡದಲ್ಲಿ ಸಿಗದಿದ್ದ ಮೇಲೆ ನಮಗೆ ಪರಭಾಷಾ ಬೇಕಿಲ್ಲ ಅನ್ನೋ ತೀರ್ಮಾನ ಕನ್ನಡಿಗರದ್ದಾಗಲಿ.@KvnProductions @ssrajamouli@RRRMovie#BoycottRRRinKarnataka pic.twitter.com/NYDEYl35n6— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) March 23, 2022
ಕನ್ನಡದಲ್ಲಿ ಡಬ್ ಆಗಿದ್ರು ಬಿಡುಗಡೆ ಮಾಡದೆ ಬರೀ ತೆಲುಗು ತಮಿಳು ಹಿಂದಿಯಲ್ಲಿ ಬಿಡುಗಡೆ ಮಾಡಿ ಕನ್ನಡದ್ರೋಹದ ಕೆಲಸ ಮಾಡುತ್ತೀರೋ ಈ ಚಿತ್ರತಂಡಕ್ಕೆ ಧಿಕ್ಕಾರ
ಕೂಡಲೇ ಎಲ್ಲೆಲ್ಲಿ ಬಿಡುಗಡೆ ಆಗ್ತಿದಿಯೋ ಅಲ್ಲೆಲ್ಲಾ ಕನ್ನಡದಲ್ಲಿ ಬಿಡುಗಡೆ ಮಾಡಿ.
ಇಲ್ಲ ನಿಮಗೆ ಕನ್ನಡಿಗರ ಬಹಿಷ್ಕಾರ@ssrajamouli @KvnProductions #BoycottRRRinkarnataka pic.twitter.com/bbKIjYKkSg— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) March 22, 2022
ಕನ್ನಡದಲ್ಲಿ ಡಬ್ ಆಗಿದ್ರು ಬಿಡುಗಡೆ ಮಾಡದೆ ಬರೀ ತೆಲುಗು ತಮಿಳು ಹಿಂದಿಯಲ್ಲಿ ಬಿಡುಗಡೆ ಮಾಡಿ ಕನ್ನಡದ್ರೋಹದ ಕೆಲಸ ಮಾಡುತ್ತೀರೋ ಈ ಚಿತ್ರತಂಡಕ್ಕೆ ಧಿಕ್ಕಾರ
ಕೂಡಲೇ ಎಲ್ಲೆಲ್ಲಿ ಬಿಡುಗಡೆ ಆಗ್ತಿದಿಯೋ ಅಲ್ಲೆಲ್ಲಾ ಕನ್ನಡದಲ್ಲಿ ಬಿಡುಗಡೆ ಮಾಡಿ.
ಇಲ್ಲ ನಿಮಗೆ ಕನ್ನಡಿಗರ ಬಹಿಷ್ಕಾರ@ssrajamouli @KvnProductions #BoycottRRRinkarnataka pic.twitter.com/ettGr0I859— ಹೊಯ್ಸಳ (@kannadiga_com) March 23, 2022
ಮೊದ್ಲು ನಮ್ ಕನ್ನಡ ಚಿತ್ರರಂಗದವ್ರು ಸರಿ ಇಲ್ಲ ಅಣ್ಣ.ಪ್ರತಿ ಸಾರಿ ಮೋಸ ಆಗ್ತಿದೆ ಅಂತ ಗೊತ್ತಿದ್ರೂ ಹೋಗಿ ಹೋಗಿ ಅವ್ರಿಗೇನೆ ಬೆಂಬಲ ಕೊಡೋದು ಎಷ್ಟರ ಮಟ್ಟಿಗೆ ಸರಿ.. ಹೆಸ್ರಿಗೆ ಬಿಡುಗಡೆಗೂ ಒಂದಿನ ಮುಂಚೆ ಟಿಕೆಟ್ ಬುಕಿಂಗ್ ತೆರೆಯುತ್ತಾರೆ, ಅಷ್ಟ್ರಲ್ಲಿ ಬೇರೆ ಭಾಷೆ ಟಿಕೆಟ್ ಗಳು ಬುಕ್ ಮಾಡಿರ್ತಾರೆ..ಇನ್ನೆಲ್ಲಿ ಕನ್ನಡ☺️
— Ameen hosamani (@thenameisameen) March 22, 2022