ಬೌನ್ಸ್‌ ಬೈಕ್‌ನಲ್ಲಿ ಸರಗಳ್ಳತನ – ವೀಡಿಯೋ ನೋಡಿ

ಪ್ರಾತಿನಿಧಿಕ ಚಿತ್ರ

ಬೌನ್ಸ್‌ ಬೈಕ್‌. ಬೆಂಗಳೂರಲ್ಲಿ ಜನಸಾಮಾನ್ಯರಿಗೆ ಅಪರೂಪದ ಸೇವೆ ನೀಡುತ್ತಿದ್ದು, ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಆದರೆ ಸರಗಳ್ಳರೇ ಈ ಬೌನ್ಸ್‌ ಬೈಕ್‌ನ್ನೇ ಬಳಸಿಕೊಂಡು ಸರಗಳ್ಳತನ ಮಾಡುತ್ತಿರುವ ಹೊಸ ಪ್ರಕರಣವೊಂದು ವರದಿ ಆಗಿದೆ.

ನಗರದ ಕೆ ಆರ್‌ ಪುರಂನ ಟಿ ಸಿ ಪಾಳ್ಯದಲ್ಲಿ ಡಿಸೆಂಬರ್‌ ೧೦ರಂದು ಮಧ್ಯಾಹ್ನ ೧ ಗಂಟೆ ೧೯ ನಿಮಿಷದ ವೇಳೆ ಬೌನ್ಸ್‌ ಬೈಕ್‌ನಲ್ಲಿ ಇಬ್ಬರು ಸವಾರರು ಮಹಿಳೆಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದರು. ಹಿಂಬದಿಯಲ್ಲಿ ಕೂತಿದ್ದ ಸರಗಳ್ಳ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಆಕೆಯ ತಲೆಯ ಹಿಂಬದಿಗೆ ಬಾರಿಸಿದ. ಕೂಡಲೇ ಆಕೆ ನೆಲಕ್ಕೆ ಬಿದ್ದರು. ಮುಂದಕ್ಕೆ ಹೋಗಿದ್ದ ಸರಗಳ್ಳರಲ್ಲಿ ಅಟ್ಯಾಕ್‌ ಮಾಡಿದ್ದವ ಮತ್ತೆ ಓಡಿಬಂದು ಆ ಮಹಿಳೆಯ ತಲೆಗೆ ಮತ್ತೆ ಬಡಿಗೆಯಿಂದ ಬಾರಿಸಿದ. ಬಳಿಕ ಆಕೆಯ ಕತ್ತಲ್ಲಿದ್ದ ಚಿನ್ನದ ಸರವನ್ನು ಕಿತ್ಕೊಂಡು ಹೋದ.

LEAVE A REPLY

Please enter your comment!
Please enter your name here