BMTCಗೆ ಬಂತು ಮೊದಲ ಎಲೆಕ್ಟ್ರಿಕ್​ ಬಸ್​..! – ಏನು ವಿಶೇಷತೆ..?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೊದಲ ವಿದ್ಯುತ್​ಚಾಲಿತ ಬಸ್​ ಸೇವೆಯನ್ನು ಆರಂಭಿಸಿದೆ.  ಬಿಎಂಟಿಸಿ ಘಟಕ 37 ಕೆಂಗೇರಿಯಲ್ಲಿ ರಾಜ್ಯದ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೊದಲ ವಿದ್ಯುತ್ ಬಸ್​ಗೆ ಸಾರಿಗೆ ಸಚಿವ ಶ್ರೀರಾಮುಲು ಚಾಲನೆ ನೀಡಿದರು.

ಗುರುಗ್ರಾಮ ಮೂಲದ ಜೆಬಿಎಂ ಕಂಪನಿ ಎಲೆಕ್ಟ್ರಿಕ್​ ಬಸ್​ಗಳನ್ನು ಬಿಎಂಟಿಸಿಗೆ ಪೊರೈಸುತ್ತಿದೆ. ಡೀಸೆಲ್​ ಬಸ್​ 30 ಲಕ್ಷ ರೂಪಾಯಿಗೆ ಲಭ್ಯವಾದರೆ ಈ ಎಲೆಕ್ಟ್ರಿಕ್​ ಬಸ್​ನ ಬೆಲೆ 90 ಲಕ್ಷ ರೂಪಾಯಿ. ಈ ಬಸ್​ ಸಂಚಾರದಿಂದ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಡಿಸೆಂಬರ್​ ಅಂತ್ಯದಲ್ಲಿ 90 ಎಲೆಕ್ಟ್ರಿಕ್​ ಬಸ್​ಗಳು ಬಿಎಂಟಿಸಿಗೆ ಬರಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್​ ಹೇಳಿದ್ದಾರೆ.

ಒಂದು ಬಾರಿ ಚಾರ್ಜ್​ ಮಾಡಿದರೆ ಈ ಬಸ್​ 120 ಕಿಲೋ ಮೀಟರ್​ ಓಡುತ್ತದೆ. ಈ ಬಸ್​ನ್ನು ದಿನಕ್ಕೆ 180 ಕಿಲೋ ಮೀಟರ್​ನಷ್ಟು ಓಡಿಸಬಬಹುದು. 1 ಕಿಲೋ ಮೀಟರ್​ಗೆ ಬಿಎಂಟಿಸಿಗೆ ತಗಲುವ ವೆಚ್ಚ 51 ರೂಪಾಯಿ. ಡ್ರೈವರ್​ ಸೀಟು ಹೊರತುಪಡಿಸಿ ಒಟ್ಟು 31 ಆಸನವಿದೆ. ಪ್ರಯಾಣಿಕರ ಮೇಲೆ ನಿಗಾ ಇಡಲು ಡ್ರೈವರ್​ ಆಸನದ ಬಳಿ ರಿವರ್ಸ್​ ಕ್ಯಾಮರಾ ಕೂಡಾ ಇದೆ.

LEAVE A REPLY

Please enter your comment!
Please enter your name here