CM ಸಿದ್ದರಾಮಯ್ಯ ಪತ್ನಿ ಮತ್ತು ಸೊಸೆ ಬಗ್ಗೆ BJP ಕಾರ್ಯಕರ್ತೆಯಿಂದ ಅಶ್ಲೀಲ ಟ್ವೀಟ್​

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ನೇತ್ರಾ ಜ್ಯೋತಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ಸಹಪಾಠಿ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಿಸಿದ ಪ್ರಕರಣವನ್ನೇ ಮುಂದಿಟ್ಟುಕೊಂಡು ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಂಬಾಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಮತ್ತು ಅವರ ಸೊಸೆ ಬಗ್ಗೆ ಅಶ್ಲೀಲ ಮತ್ತು ಅಸಭ್ಯ ಟೀಕೆ ಮಾಡಿದ್ದಾರೆ.

ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ.. @siddaramaiah ನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ?

ಎಂದು ಶಕುಂತಲಾ ಟ್ವೀಟಿಸಿದ್ದಾರೆ.

ಬಿಜೆಪಿ ಸಂಸದ ಬ್ರಿಜ್​ ಭೂಷಣ್​ ಸರಣ್​ ಸಿಂಗ್​ ವಿರುದ್ಧ ಮಹಿಳಾ ಕುಸ್ತಿಪಟುಗಳು ಹೋರಾಟ ಮಾಡಿದ್ದಾಗ ಕೂಡಾ ಶಕುಂತಲ ಮಹಿಳಾ ಕುಸ್ತಿ ಪಟುಗಳ ಬಗ್ಗೆ ಟೀಕೆ ಮಾಡಿ ಟ್ವೀಟಿಸಿದ್ದರು. ಒಡಿಶಾ ರೈಲು ದುರಂತದ ಬಗ್ಗೆ ಕೋಮು ಹಿನ್ನೆಲೆ ಎಂದು ಹೇಳಿ ಟ್ವೀಟಿಸಿದ್ದರು.

LEAVE A REPLY

Please enter your comment!
Please enter your name here