ದಲಿತರು ಬಿಜೆಪಿ ರಾಜ್ಯಾಧ್ಯಕ್ಷರಾಗಬಾರದೇ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಪ್ರಶ್ನಿಸಿದ್ದಾರೆ.
ಪ್ರತಿಯೊಬ್ಬ ಮನುಷ್ಯನಿಗೂ ಆಸೆ ಇದೆ. ಮಾಡಿದ್ರೆ ನಾವೂ ರಾಜ್ಯಾಧ್ಯಕ್ಷರಾಗ್ತೀವಿ. ಯಾಕೆ ಆಗಬಾರದು..? ದಲಿತರು ಆಗ್ಬಾರದಾ..?
ಎಂದು ಸಂಸದ ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡುವಂತೆ ಎರಡು ಕ್ಷೇತ್ರಗಳಲ್ಲಿ ಸೋತಿರುವ ಮಾಜಿ ಸಚಿವ ವಿ ಸೋಮಣ್ಣ ಅವರು ಹೇಳಿದ ಬೆನ್ನಲ್ಲೇ ಸಂಸದ ರಮೇಶ್ ಜಿಗಜಿಣಗಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ADVERTISEMENT
ADVERTISEMENT