ಮಂಗಳೂರು: BJP-SDPI ಮೈತ್ರಿ: SDPIಗೆ ಅಧ್ಯಕ್ಷ ಸ್ಥಾನ

ಮಂಗಳೂರು ತಾಲೂಕಿನ ತಲಪಾಡಿ ಗ್ರಾಮ ಪಂಚಾಯತ್​ನಲ್ಲಿ ಬಿಜೆಪಿ ಮತ್ತು ಎಸ್​ಡಿಪಿಐ ಮೈತ್ರಿ ಮಾಡಿಕೊಂಡಿದ್ದ, ಗ್ರಾಮ ಪಂಚಾಯತ್​ ಅಧ್ಯಕ್ಷ ಸ್ಥಾನ ಎಸ್​ಡಿಪಿಐ ಪಾಲಾಗಿದೆ.

ಎಸ್​ಡಿಪಿಐ ಬೆಂಬಲಿತ ಟಿ ಇಸ್ಮಾಯಿಲ್​ ಅವರು ಗ್ರಾಮ ಪಂಚಾಯತ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪಾವತಿ ಆಯ್ಕೆಯಾಗಿದ್ದಾರೆ.

ತಲಪಾಡಿ ಗ್ರಾಮ ಪಂಚಾಯತ್​ನಲ್ಲಿ 13 ಬಿಜೆಪಿ ಮತ್ತು 10 ಮಂದಿ ಎಸ್​ಡಿಪಿಐ ಮತ್ತು ಓರ್ವ ಕಾಂಗ್ರೆಸ್​ ಸದಸ್ಯರಿದ್ದಾರೆ.

ಬಿಜೆಪಿ ಸದಸ್ಯರೇ ಎಸ್​ಡಿಪಿಐಗೆ ಬೆಂಬಲ ನೀಡಿದ್ದರಿಂದ ಸ್ವಪಕ್ಷದ ಗ್ರಾಮ ಪಂಚಾಯತ್​ ಸದಸ್ಯ ಸತ್ಯರಾಜ್​ ಅವರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ.

LEAVE A REPLY

Please enter your comment!
Please enter your name here