ಬಿಜೆಪಿಯ ಅತೃಪ್ತರ ಡಿಮ್ಯಾಂಡ್ ಏನು? ರೆಬೆಲ್ಸ್ ಮೀಟಿಂಗ್‌ನಲ್ಲಿ ಇದೇ ನಡೆದಿದ್ದು!

ಜೂನ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಅನ್ನೋ ಮಾತು ಕೇಳಿಬರ್ತಿವೆ. ಇದರ ಬೆನ್ನಲ್ಲೇ ಕಮಲ ಪಾಳಯದಲ್ಲಿ ಭಿನ್ನಮತದ ರಾಡಿ ಎದ್ದಿದೆ. ರಾಜಾಹುಲಿ ಯಡಿಯೂರಪ್ಪನವರ ವಿರುದ್ಧವೇ 10 ಶಾಸಕರು ಬಂಡಾಯವೆದ್ದಿದ್ದಾರೆ. ಸಚಿವ ಸ್ಥಾನಕ್ಕಾಗಿ 10ಕ್ಕೂ ಹೆಚ್ಚು ಶಾಸಕರು ಬಸವರಾಜ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಗುಪ್ತ್ ಗುಪ್ತ್ ಸಭೆ ಸೇರಿದ್ದರು ಎನ್ನಲಾಗಿದೆ.. ಈ ಅತೃಪ್ತ ಶಾಸಕರು ಸಿಎಂ ಬಿಎಸ್‌ವೈ ಮುಂದೆ ಕೆಲ ಡಿಮ್ಯಾಂಡ್ ಇಡಲು ಮುಂದಾಗಿದ್ದಾರೆ

ಅತೃಪ್ತರ ಡಿಮ್ಯಾಂಡ್ ಏನು?

1. ಉತ್ತರ ಕರ್ನಾಟಕದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು.
2. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸವರಾಜ್ ಪಾಟೀಲ್ ಯತ್ನಾಳ್‌ಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡಬೇಕು.
3. ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಯನ್ನ ರಾಜ್ಯಸಭೆಗೆ ಪರಿಗಣಿಸಬೇಕು, ಇಲ್ಲದಿದ್ರೆ ಪರಿಷತ್ ಸ್ಥಾನವನ್ನಾದ್ರೂ ನೀಡಬೇಕು
4. ಬಿಎಸ್‌ವೈ ಪಿಎ ಆಗಿದ್ದ ಎನ್.ಆರ್.ಸಂತೋಷ್​ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಬಾರದು.
5. ಸಿಎಂ ಪುತ್ರ ಬಿ.ವೈ.ವಿಜಯೇಂದ್ರರನ್ನು ಕಂಟ್ರೋಲ್ ಮಾಡಬೇಕು

ಇದಿಷ್ಟೂ ಅತೃಪ್ತ ಶಾಸಕರ ಸಭೆಯಲ್ಲಿ ನಡೆದ ಚರ್ಚೆ… ಈ ಲಾಕ್‌ಡೌನ್ ಮುಗಿಯುತ್ತಿದ್ದಂತೆ ಬಿಜೆಪಿ ಹೈಕಮಾಂಡ್‌ನ್ನು ಭೇಟಿ ಮಾಡಿ ದೂರು ‌ನೀಡೋದಕ್ಕೂ ಅತೃಪ್ತರ ಗ್ಯಾಂಗ್ ತೀರ್ಮಾನಿಸಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here