BIG BREAKING: ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಸ್ಥಾನ

ಬಿಜೆಪಿ ತನ್ನ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯನ್ನು ಪುನರ್​ರಚಿಸಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ಸೇರಿಸಿಕೊಂಡಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚವ್ಹಾಣ್​ ಅವರನ್ನು ಕೈಬಿಡಲಾಗಿದೆ.

ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ಸೇರಿಸಿದ್ದು ಮಹತ್ವ ಪಡೆದಿದೆ. ವಿಧಾನಸಭಾ ಚುನಾವಣೆಯಲ್ಲಿ  ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯೇ ಟಿಕೆಟ್​ ಅಂತಿಮಗೊಳಿಸುತ್ತದೆ.

ಪಟ್ಟಿಯಲ್ಲಿ ಐದನೇಯವರಾಗಿ ಯಡಿಯೂರಪ್ಪ ಅವರ ಹೆಸರನ್ನು ಕಾಣಿಸಲಾಗಿದೆ. 11ನೇಯವರಾಗಿ ಬಿ ಎಲ್​ ಸಂತೋಷ್​ ಅವರನ್ನು ಕಾಣಿಸಲಾಗಿದೆ

ಅಸ್ಸಾಂನ ಮಾಜಿ ಸಿಎಂ ಸರ್ಬಾನಂದ ಸೋನಾವಾಲಾ, ತೆಲಂಗಾಣ ಮೂಲದ ರಾಜ್ಯಸಭಾ ಸಂಸದ ಕೆ ಲಕ್ಷ್ಮಣ್​, ಸುಧಾ ಯಾದವ್​, ಸತ್ಯನಾರಾಯಣ್​ ಜತಿಯಾ, ಇಕ್ಬಾಲ್​ ಸಿಂಗ್​ ಲಾಲ್​ಪುರ ಅವರನ್ನು ಸೇರ್ಪಡೆಗೊಳಿಸಲಾಗಿದೆ.

ಸಂಸದೀಯ ಮಂಡಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್​ನಾಥ್​ ಸಿಂಗ್, ಬಿ ಎಲ್​ ಸಂತೋಷ್​​ ಇದ್ದಾರೆ.

ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಸಂಸದೀಯ ಮಂಡಳಿ ಸದಸ್ಯರೂ ಮಾತ್ರವಲ್ಲದೇ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನಾವೀಸ್​, ಭೂಪೇಂದ್ರ ಯಾದವ್​, ಓಂ ಮಾಥೂರ್​, ತಮಿಳುನಾಡು ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್​ ಸೇರಿದಂತೆ ಒಟ್ಟು 15 ಮಂದಿ ಇದ್ದಾರೆ.

LEAVE A REPLY

Please enter your comment!
Please enter your name here