ಬಿಜೆಪಿಯ ಹಾಲಿ 13 ಸಂಸದರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನವಾಗಿದೆ. ಇವರ ಬದಲಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾದ ಹಲವು ಪ್ರಮುಖರಿಗೆ ಟಿಕೆಟ್ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಯಾರಿಗೆ ಎಲ್ಲಿಂದ ಟಿಕೆಟ್ ಸಿಗಬಹುದು?
* ವಿಜಯಪುರದಿಂದ ಹಾಲಿ ಸಂಸದ ರಮೇಶ್ ಜಿಗಜಿಣಗಿ ಬದಲು ಗೋವಿಂದ ಕಾರಜೋಳ ಇಲ್ಲವೇ ಅರವಿಂದ ಲಿಂಬಾವಳಿಗೆ ಟಿಕೆಟ್ ಸಿಗಬಹುದು
* ತುಮಕೂರಿನಿಂದ ಜಿಎಸ್ ಬಸವರಾಜು ಬದಲು ಮಾಜಿ ಮಂತ್ರಿ ವಿ ಸೋಮಣ್ಣಗೆ ಮಣೆ ಹಾಕಬಹುದು
* ಬೆಂಗಳೂರು ಉತ್ತರ ಇಲ್ಲವೇ ಚಿಕ್ಕಬಳ್ಳಾಪುರದಿಂದ ಮಾಜಿ ಮಂತ್ರಿ ಸುಧಾಕರ್ ಸ್ಪರ್ಧೆ ಮಾಡಬಹುದು
* ಹಾವೇರಿಯಿಂದ ಶಿವಕುಮಾರ್ ಉದಾಸಿ ಬದಲಿಗೆ ಮಾಜಿ ಜಿ ಮಂತ್ರಿ ಬಿಸಿ ಪಾಟೀಲ್ಗೆ ಟಿಕೆಟ್ ಸಿಗಬಹುದು
* ಬಳ್ಳಾರಿಯಿಂದ ಸಂಸದ ದೇವೇಂದ್ರಪ್ಪ ಬದಲು ಮಾಜಿ ಮಂತ್ರಿ ಶ್ರೀರಾಮುಲು ಅವರಿಗೆ ಬಿಜೆಪಿ ಮಣೆ ಹಾಕಬಹುದು
* ಉತ್ತರ ಕನ್ನಡದಿಂದ ಅನಂತ್ ಕುಮಾರ್ ಹೆಗಡೆ ಬದಲಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿಜೆಪಿ ಟಿಕೆಟ್ ನೀಡಬಹುದು
* ಕೊಪ್ಪಳದಿಂದ ಸಂಸದ ಸಂಗಣ್ಣ ಕರಡಿ ಬದಲಾಗಿ ಮಾಜಿ ಮಂತ್ರಿ ಆನಂದ್ ಸಿಂಗ್ಗೆ ಬಿಜೆಪಿ ಟಿಕೆಟ್ ನೀಡಬಹುದು
* ಬಾಗಲಕೋಟೆಯಿಂದ ಪಿಸಿ ಗದ್ದೀಗೌಡರ್ ಬದಲಿಗೆ ಮಾಜಿ ಮಂತ್ರಿ ಮುರುಗೇಶ ನಿರಾಣಿಗೆ ಟಿಕೆಟ್ ಸಿಗಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.