BREAKING: ದಂಗೆ ಪ್ರಕರಣ – BJP ಸಂಸದ, ಮಾಜಿ ಸಚಿವಗೆ 2 ವರ್ಷ ಜೈಲು ಶಿಕ್ಷೆ – ಸಂಸದ ಸ್ಥಾನದಿಂದ ಅನರ್ಹ ಸಾಧ್ಯತೆ

ದಂಗೆ ಪ್ರಕರಣದಲ್ಲಿ ಉತ್ತರಪ್ರದೇಶದ ಬಿಜೆಪಿ ಸಂಸದ ಡಾ ರಾಮಶಂಕರ್​ ಕಥೇರಿಯಾ ಅವರನ್ನು ದೋಷಿ ಎಂದು ಘೋಷಿಸಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಉತ್ತರಪ್ರದೇಶದ ಶಾಸಕರು/ಸಂಸದರ ವಿರುದ್ಧ ಪ್ರಕರಣಗಳ ವಿಚಾರಣಾ ನ್ಯಾಯಾಲಯ ಸಂಸದರನ್ನು ದೋಷಿ ಎಂದು ಘೋಷಿಸಿ ತೀರ್ಪು ನೀಡಿದೆ. ಸಂಸದರಿಗೆ 50 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

2011ರಲ್ಲಿ ಸಂಸದರ ವಿರುದ್ಧ ಐಪಿಸಿ ಕಲಂ 147 (ದಂಗೆ ವಿರುದ್ಧ) ಕಲಂ 323 (ಸ್ವಯಂಪ್ರೇರಿತರಾಗಿ ಹಾನಿ ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

2 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಎಟಾವ್​ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಕಥೇರಿಯಾ ಸಂಸದ ಸ್ಥಾನದಿಂದ ಅನರ್ಹಗೊಳ್ಳಬಹುದು.

ಜನಪ್ರತಿನಿಧಿ ಕಾಯ್ದೆ 1951ರ ಕಲಂ 8 ಉಪ ಕಲಂ 3ರಡಿಯಲ್ಲಿ 2 ಅಥವಾ 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೊಳಲಾಗುವ ಸಂಸದರು ಅಥವಾ ಶಾಸಕರು ಶಿಕ್ಷೆಯ ತೀರ್ಪು ಪ್ರಕಟವಾದ ತತ್​ಕ್ಷಣವೇ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಮಾರ್ಚ್​ 23ರಂದು ರಾಹುಲ್​ ಗಾಂಧಿ ವಿರುದ್ಧ ಸೂರತ್​ ನ್ಯಾಯಾಲಯ ತೀರ್ಪು ನೀಡಿದ ದಿನವೇ ಲೋಕಸಭಾ ಸ್ಪೀಕರ್​ ಅವರು ರಾಹುಲ್​ ಅವರನ್ನು ಅನರ್ಹಗೊಳಿಸಿದ್ದರು.

2011ರ ನವೆಂಬರ್​ 15ರಲ್ಲಿ ಟೊರೆಂಟ್​ರ್ ಪವರ್​ ಲಿಮಿಟೆಡ್​ ಕಂಪನಿಯ ಕಚೇರಿಗೆ ನುಗ್ಗಿ ಬೆಂಬಲಿಗರೊಂದಿಗೆ ಸಂಸದ ರಾಮಶಂಕರ್​ ಕಥೇರಿಯಾ ದಾಂಧಲೆ ಮಾಡಿ ಕಂಪನಿ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದರು.

2014-2016ರವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ರಾಮಶಂಕರ್​ ಅವರು ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವರಾಗಿದ್ದರು.

LEAVE A REPLY

Please enter your comment!
Please enter your name here