6 ಮಂದಿ ಮಹಿಳಾ ಕುಸ್ತಿಪಟುಗಳು ಮತ್ತು ಅಪ್ರಾಪ್ತ ಬಾಲಕಿ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ತನಿಖೆ ನಡೆಯುತ್ತಿದೆ, ನಡೆಯಲಿ, ಅದು ದೆಹಲಿ ಪೊಲೀಸರ ಕೈಯಲ್ಲಿದೆ. ಒಂದು ವೇಳೆ ತಪ್ಪಿತಸ್ಥ ಎಂದು ಕಂಡುಬಂದಲ್ಲಿ ಆಮೇಲೆ ಬಂಧಿಸಲಿ
ಎಂದು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ತನಿಖೆ ನಡೆಯುತ್ತಿದೆ, ನಾನೇನು ಮಾಡಲು ಸಾಧ್ಯ..? ಇವತ್ತು ಗಂಗಾ ನದಿಯಲ್ಲಿ ಪದಕ ಎಸೆಯಲು ಹೋಗಿದ್ದರು. ಪದಕವನ್ನು ಈಗ ಟಿಕಾಯತ್ ಅವರಿಗೆ ಕೊಟ್ಟಿದ್ದಾರೆ. ಅದು ಅವರ ತೀರ್ಮಾನ. ನಾನೇನು ಮಾಡಲು ಸಾಧ್ಯ..? ಒಕ್ಕೂಟದಲ್ಲಿ ನಮ್ಮ ಅಧ್ಯಕ್ಷ ಅವಧಿ ಮುಗಿದಿದೆ
ಎಂದು ಸಂಸದ ಬ್ರಿಜ್ ಭೂಷಣ್ ಹೇಳಿದ್ದಾರೆ.
ADVERTISEMENT
ADVERTISEMENT