ವಿಧಾನಸಸಭೆಯಲ್ಲಿ ದುವರ್ತನೆ ತೋರಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಯು ಟಿ ಖಾದರ್ ಅವರು ಶುಕ್ರವಾರದವರೆಗೆ ಕಲಾಪದಿಂದ ಅಮಾನತು ಮಾಡಿದ್ದಾರೆ.
ಮಾಜಿ ಡಿಸಿಎಂ ಆಗಿರುವ ಡಾ ಸಿ ಎನ್ ಅಶ್ವತ್ಥ್ ನಾರಾಯಣ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಪದ್ಮನಾಭ ನಗರ ಶಾಸಕ ಆರ್ ಅಶೋಕ್, ವೇದವ್ಯಾಸ್ ಕಾಮತ್, ಉಮನಾಥ್ ಕೋಟ್ಯಾನ್, ಯಶ್ಪಾಲ್ ಸುವರ್ಣ, ಧೀರಜ್ ಮುನಿರಾಜ್, ಅರವಿಂದ ಬೆಲ್ಲದ್, ಅರಗ ಜ್ಞಾನೇಂದ್ರ ಮತ್ತು ಭರತ್ ಶೆಟ್ಟಿ ಅವರನ್ನು ಜುಲೈ 21ರವರೆಗೆ ಅಂದರೆ ಈ ಅಧಿವೇಶನ ಮುಗಿಯುವರೆಗೆ ಅಮಾನತು ಮಾಡಲಾಗಿದೆ.
ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಪೀಠದ ಎದುರು ಬಿಜೆಪಿ ಶಾಸಕರು ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿ ಸದನಕ್ಕೆ ಅಗೌರವ ತೋರಿದ್ದರು.
ADVERTISEMENT
ADVERTISEMENT