ಸಿದ್ದರಾಮಯ್ಯ ಧಮ್​ ಬಗ್ಗೆ ಕೇಳ್ಬೇಡಿ – ಸಿಎಂ ಬೊಮ್ಮಾಯಿ ಧಮ್​ ಬಗ್ಗೆ ಪ್ರಶ್ನಿಸಿದ ಬಿಜೆಪಿ ಶಾಸಕ ಯತ್ನಾಳ್​

ದೊಡ್ಡಬಳ್ಳಾಪುರದಲ್ಲಿ (Doddaballapur) ನಡೆದಿದ್ದ ಜನಸ್ಪಂದನ (Janaspandana) ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Ex Chief Minister Siddaramaiah) ಅವರ ಧಮ್​, ತಾಕತ್ತು ಪ್ರಶ್ನಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ (CM Basavraj Bommai) ಅವರ ಧಮ್​, ತಾಕತ್ತನ್ನು ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ. ಸರಿಯಾಗಿ ರಕ್ಷಣೆ ಇಲ್ಲ. ನಾವು ಸಮಯ ಸಂದರ್ಭ ಬಂದಾಗ ನಮ್ಮ ಗೃಹ ಸಚಿವರು (Home Minsiter), ಮುಖ್ಯಮಂತ್ರಿಗಳ ಜೊತೆಗೆ ಗಲಾಟೆ ಮಾಡಿದ್ದೀವಿ. ಮೊನ್ನೆ ಶಾಸಕಾಂಗ ಪಕ್ಷದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೀನಿ ಮುಖ್ಯಮಂತ್ರಿಗಳಿಗೆ, ಯಡಿಯೂರಪ್ಪನವರೂ ( B S Yadiyurappa) ಇದ್ದರು, ಗೃಹ ಮಂತ್ರಿ ಇದ್ದರು, ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ (Nalin Kumar Kateel) ಇದ್ದರು.
ಒಂದು ವೇಳೆ ಕರ್ನಾಟಕದಲ್ಲಿ ಇನ್ಮೇಲೆ ಹಿಂದೂಗಳ ಹತ್ಯೆಯಾದ್ರೆ ಜನ ನಿಮ್ಮನ್ನು ತಿರಸ್ಕಾರ ಮಾಡ್ತಾರೆ. ನಿಮಗೆ ಏನಾದ್ರೂ ಧಮ್ಮಿದ್ರೆ, ಬರೀ ಅವ್ರು ಸಿದ್ದರಾಮಯ್ಯಗೆ ಕೇಳ್ಬೇಡ್ರಿ, ನಿಮ್ಮಲ್ಲಿ ಧಮ್​ ಇದ್ರೆ ಯಾರು ಹಿಂದೂಗಳ ಕಾರ್ಯಕರ್ತರ ಹತ್ಯೆ ಮಾಡ್ತಾರೋ ಅವರ ಎನ್​ಕೌಂಟರ್ (Encounter)​ ಮಾಡಿದ್ರೆ ನಿಮ್​ ಧಮ್​ ಗೊತ್ತಾಗುತ್ತೆ ಅಂತ ಹೇಳಿದ್ದೀನಿ.
ಎಂದು ಯಾದಗಿರಿಯಲ್ಲಿ ಭಜರಂಗ ದಳ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ದರ್ಶನ ಪಡೆದ ಬಳಿಕ ಮಾತಾಡಿದರು.

LEAVE A REPLY

Please enter your comment!
Please enter your name here