ಪ್ರವಾದಿ ಮಹಮ್ಮದರ ಅವಹೇಳನ – ಬಿಜೆಪಿ ಶಾಸಕ ಟೈಗರ್​ ರಾಜಾಸಿಂಗ್​ ಬಂಧನ

T Rajasingh

ಪ್ರವಾದಿ ಮಹಮ್ಮದರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಟಿ ರಾಜಾಸಿಂಗ್​ (BJP MLA T Rajasingh) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ (Hyderbad)​ ಪೊಲೀಸರು ಶಾಸಕ ರಾಜಾಸಿಂಗ್​ ಅವರನ್ನು ಬಂಧಿಸಿದ್ದಾರೆ.

ಪ್ರವಾದಿ ಮಹಮ್ಮದರ ಬಗ್ಗೆ ರಾಜಾಸಿಂಗ್​ ಮಾಡಿದ್ದ ಅವಹೇಳನಕಾರಿ ಭಾಷಣದ ವೀಡಿಯೋ ಬಹಿರಂಗ ಆದ ಬಳಿಕ ಹೈದ್ರಾಬಾದ್​ ಪೊಲೀಸ್​ ಆಯುಕ್ತರ ಕಚೇರಿ ಎದುರು ಮುಸಲ್ಮಾನ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದರು.

ರಾಜಾಸಿಂಗ್​ ಗೋಶಾಮಹಲ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ. ಪ್ರಚೋದನಕಾರಿ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ವಿವಾದಿತ ರಾಜಕಾರಣಿ.

LEAVE A REPLY

Please enter your comment!
Please enter your name here