ಒಂದೂವರೆ ಅಡಿ ನೀರಲ್ಲಿ ದೋಣಿಯಲ್ಲೇ ಬಿಜೆಪಿ ಶಾಸಕ ಮಹೇಶ್​ ಪ್ರವಾಹ ವೀಕ್ಷಣೆ – ಜನರ ಟೀಕೆ

BJP MLA N Mahesh
BJP MLA N Mahesh
ಪ್ರವಾಹ ಪೀಡಿತ ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲ (Kollegal) ಶಾಸಕ ಎನ್​ ಮಹೇಶ್​ (MLA N Mahesh) ಅವರು ದೋಣಿಯಲ್ಲಿ ಕೂತು ಪ್ರವಾಹ ವೀಕ್ಷಣೆ ಮಾಡಿದ್ದು ಈಗ ಕೊಳ್ಳೇಗಾಲ ಮತದಾರರ ಟೀಕೆಗೆ ಗುರಿಯಾಗಿದೆ.
ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ ಬಿಜೆಪಿ ಶಾಸಕ ಎನ್​ ಮಹೇಶ್​ ಪ್ರವಾಹ ವೀಕ್ಷಣೆ ಮಾಡಿದ್ದರು.
ಶಾಸಕರು ಪ್ರವಾಹ ವೀಕ್ಷಣೆಗೆ ತೆರಳಿದ್ದು ದೋಣಿಯಲ್ಲೇ (Boat Riding). ಶಾಸಕರು ಕೂತಿದ್ದ ದೋಣಿಯನ್ನು ಸ್ಥಳೀಯರೇ ತಳ್ಳಿಕೊಂಡು ಹೋಗಬೇಕಾಯಿತು.
ಒಂದೂವರೆ ಅಡಿಯಷ್ಟು ನೀರು ನಿಂತಿದ್ದರೂ ಶಾಸಕರು ದೋಣಿಯಿಂದ ಇಳಿಯದೇ ದೋಣಿಯಲ್ಲೇ ಕೂತು ಪ್ರವಾಹ ವೀಕ್ಷಿಸಿದರು.
ಬಹುದೂರಕ್ಕೆ ದೋಣಿಯನ್ನು ತಳ್ಳಿಕೊಂಡು ಹೋದ ಬಳಿಕ ಕೊನೆಗೆ ಶಾಸಕರು ದೋಣಿಯಿಂದ ಇಳಿದು ಬೆಂಬಲಿಗರ ಜೊತೆಗೆ ಪ್ರವಾಹ ವೀಕ್ಷಣೆ ಮಾಡಿದರು.

LEAVE A REPLY

Please enter your comment!
Please enter your name here