BJP ಶಾಸಕರ ನೇತೃತ್ವದಲ್ಲಿ ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ, ಆಸ್ತಿಗೆ ಹಾನಿ – BJP ರೌಡಿ ಮೋರ್ಚಾ ಎಂದ ಕಾಂಗ್ರೆಸ್​

ವಿದ್ಯುತ್​ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸುವ ವೇಳೆ ಬಿಜೆಪಿ ಕಾರ್ಯಕರ್ತರು ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ ಮಾಡಿದ್ದಾರೆ.

ಮೆಸ್ಕಾಂ  ಕಚೇರಿಯ ಕಿಟಕಿ ಮತ್ತು ನೋಟಿಸ್​ ಬೋರ್ಡ್​ನ ಗಾಜುಗಳನ್ನು ಕಲು ತೂರಿ ಪುಡಿ ಪುಡಿ ಮಾಡಿದ್ದಾರೆ.

ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಮತ್ತು ಪಾಲಿಕೆ ಮೇಯರ್​ ಶಿವಕುಮಾರ್​ ನೇತೃತ್ವದಲ್ಲಿ ಬಿಜೆಪಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿತು.

ರೈಲ್ವೆ ನಿಲ್ದಾಣದ ಬಳಿ ಇರುವ ಮೆಸ್ಕಾಂ ಕಚೇರಿಗೆ ಕಲ್ಲು ತೂರಾಟ ಮಾಡಿರುವುದನ್ನು ಕಾಂಗ್ರೆಸ್​ ಖಂಡಿಸಿದೆ.

ಶಿವಮೊಗ್ಗದ ಮೆಸ್ಕಾ ಕಚೇರಿ ಮೇಲೆ @BJP4Karnataka#ROwdyMorcha ಕಾರ್ಯಕರ್ತರು ತಮ್ಮ ಗುಂಡಾ ಪ್ರವೃತ್ತಿ ತೋರಿದ್ದಾರೆ. ಪ್ರತಿಭಟನೆಯನ್ನು ಶಾಂತ ರೀತಿಯಲ್ಲಿ ಮಾಡಬೇಕು. ಕಚೇರಿ ಕಿಡಕಿಗಳಿಗೆ ಕಲ್ಲು ತೂರಿ ಗ್ಲಾಸ್ ಒಡೆದು ಹಾಕಿದ್ದಾರೆ. ನೋಟೀಸ್ ಬೋರ್ಡ್ ಕಿತ್ತು ಹಾಕಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿ ಹಾಳುಗೆಡುವುದು ತಪ್ಪಲ್ವಾ?

@mepratap ಅವರೇ, ಇದಕ್ಕೆಲ್ಲಾ ನಿಮ್ಮ ಕುಮ್ಮಕ್ಕಿದೆಯಾ?, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೇ, ಮನನೊಂದಿರುವ @ikseshwarappa ಅವರ ಕುಮ್ಮಕಿದೆಯಾ? #RowdyMorchaBJP

ಎಂದು ಕಾಂಗ್ರೆಸ್​ ಯುವ ಘಟಕ ಪ್ರಶ್ನಿಸಿದೆ.