ಲೋಕಸಭಾ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಇತರೆ ಪಕ್ಷಗಳ ತಾಲೀಮು ಚುರುಕು ಪಡೆದಿದೆ.
ಜುಲೈ 18 ಮತ್ತು 19ರಂದು ಎರಡು ದಿನಗಳ ಬೆಂಗಳೂರಲ್ಲಿ ವಿರೋಧ ಪಕ್ಷಗಳ ರಾಷ್ಟ್ರೀಯ ಸಭೆ ಆಯೋಜನೆಯಾಗಿದ್ದರೆ, ಅತ್ತ ದೆಹಲಿಯಲ್ಲಿ ಜೂನ್ 18ರಂದೇ ಬಿಜೆಪಿ ನೇತೃತ್ವದಲ್ಲಿ ಎನ್ಡಿಎ ಸದಸ್ಯ ಪಕ್ಷಗಳ ಸಭೆ ಆಯೋಜನೆಯಾಗಿದೆ.
ಹೀನಾಯ ಸೋಲು ತಂದಿಟ್ಟ ಆತಂಕ:
ಮೋದಿ ನಾಯಕತ್ವ ನಂಬಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ರಾಷ್ಟ್ರೀಯ ರಾಜಕಾರಣದಲ್ಲಿ ತನ್ನ ತಂತ್ರ ಬದಲಿಸಿರುವ ಬಿಜೆಪಿ ಹಳೆಯ ಮತ್ತು ಹೊಸ ಮಿತ್ರರಿಗೆ ಮೈತ್ರಿ ಆಹ್ವಾನವನ್ನು ನೀಡಿದೆ.
ಕೇವಲ ಮೋದಿ ನಾಯಕತ್ವವನ್ನು ನಂಬಿಕೊಂಡು ಹೋದರೆ ಲೋಕಸಭಾ ಚುನಾವಣೆಯಲ್ಲಿ ಮುಖಭಂಗವಾದರೂ ಅಚ್ಚರಿಯಿಲ್ಲ ಎಂಬ ಆತಂಕ ಬಿಜೆಪಿಗೆ ಶುರುವಾಗಿದೆ. ಹೀಗಾಗಿ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳಿಗೂ ಬಿಜೆಪಿ ಹೊಂದಾಣಿಕೆ ಕರೆ ಹೋಗಿದೆ.
ಸ್ವತಃ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾರವರೇ ಪತ್ರ ಮೂಲಕ ಎನ್ಡಿಎ ಬಿಟ್ಟು ಹೋಗಿರುವ ಹಳೆಯ ಮಿತ್ರ ಪಕ್ಷಗಳು ಮತ್ತು ಹೊಸದಾಗಿ ಸೇರಬಹುದಾದ ಮಿತ್ರ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.
ಮಂಗಳವಾರ ನಡೆಯುವ ಎನ್ಡಿಎ ಸಭೆಯಲ್ಲಿ 18 ಪಕ್ಷಗಳು ಭಾಗವಹಿಸಬಹುದು ಮತ್ತು ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಇನ್ನಷ್ಟು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು.
ಕರ್ನಾಟಕ: ಜೆಡಿಎಸ್ (ಇಲ್ಲಿಯವರೆಗೆ ಆಹ್ವಾನ ಬಂದಿಲ್ಲ, ಆದರೆ ಲೋಕಸಭೆಯಲ್ಲಿ ಮೈತ್ರಿ ಖಚಿತ)
ಆಂಧ್ರಪ್ರದೇಶ: ಜನಸೇನಾ ಪಕ್ಷ, ತೆಲುಗು ದೇಶಂ ಪಕ್ಷ (ಟಿಡಿಪಿಗೆ ಆಹ್ವಾನ ಬಂದಿಲ್ಲ, ಆದರೆ ಮೈತ್ರಿ ಆಗುವ ನಿರೀಕ್ಷೆ ಇದೆ)
ಪಂಜಾಬ್: ಅಕಾಲಿದಳ (ಆಹ್ವಾನ ಹೋಗಿಲ್ಲ, ಆದರೆ ಮೈತ್ರಿ ಆಗುವ ಸಾಧ್ಯತೆ ಹೆಚ್ಚಿದೆ)
ಮಹಾರಾಷ್ಟ್ರ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ – ಈ ಪಕ್ಷಕ್ಕೆ ನಾಗಲ್ಯಾಂಡ್ನಲ್ಲೂ ಅಸ್ತಿತ್ವ ಇದೆ)
ಉತ್ತರಪ್ರದೇಶ: ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಆಹ್ವಾನ ಹೋಗಿಲ್ಲ, ಆದ್ರೆ ಮೈತ್ರಿ ಆಗಬಹುದು, ಬಿಜೆಪಿಯ ಹಳೆ ಮಿತ್ರ ಪಕ್ಷ), ಅಪ್ನಾದಳ್ (ಅನುಪ್ರಿಯಾ ಪಟೇಲ್ ನಾಯಕಿ)
ಬಿಹಾರ: ಲೋಕಜನಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್- ಚಿರಾಗ್ ಪಾಸ್ವಾನ್ ನಾಯಕ), ರಾಷ್ಟ್ರೀಯ ಲೋಕ ಸಮತ ಪಕ್ಷ (ಉಪೇಂದ್ರ ಕುಶ್ವಾ), ನಿಶಾದ್ ಪಕ್ಷ ( ಸಂಜಯ್ ನಿಶಾದ್), ಹಿಂದೂಸ್ತಾನಿ ಅವಾಮಿ ಮೋರ್ಚಾ (ಜಿತನ್ರಾಂ ಮಾಂಝಿ), ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಪಶುಪತಿ ಕುಮಾರ್ ಪರಾಸ್)
ಹರಿಯಾಣ: ಜನ ನಾಯಕ ಜನತಾ ಪಕ್ಷ (ಜೆಜೆಪಿ)
ತಮಿಳುನಾಡು: ಎಐಎಡಿಎಂಕೆ, ತಮಿಳ್ ಮನಿಲ ಕಾಂಗ್ರೆಸ್, ಇಂಡಿಯಾ ಮಕ್ಕಳ್ ಕಳವಿ ಮುನೆತ್ರ ಕಳಗಂ, ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ)
ಜಾರ್ಖಂಡ್: ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ
ಮೇಘಾಲಯ: ಎನ್ಪಿಪಿ (ಕಾನಾರ್ಡ್ ಸಂಗ್ಮಾ ನಾಯಕ)
ನಾಗಲ್ಯಾಂಡ್: ನಾಗಲ್ಯಾಂಡ್ ಡೆಮಾಕ್ರಾಟಿಕ್ ಪೀಪಲ್ಸ್ ಪಾರ್ಟಿ
ಸಿಕ್ಕಿಂ: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಮಿಜೋ ನ್ಯಾಷನಲ್ ಫ್ರಂಟ್
ಅಸ್ಸಾಂ: ಅಸ್ಸಾಂ ಗಣ ಪರಿಷತ್, ಯುನೈಟೆಡ್ ಪೀಪಲ್ಸ್ ಪಾರ್ಟಿ (ಲಿಬರಲ್)
ADVERTISEMENT
ADVERTISEMENT